ನಿರುದ್ಯೋಗಿಗಳಿಗೆ ಗುಡ್ ನ್ಯೂಸ್
ಜಪಾನ್ ಸುಮಾರು 2 ಲಕ್ಷಕ್ಕೂ ಹೆಚ್ಚು ಭಾರತೀಯ ಟೆಕ್ಕಿಗಳಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದೆ. ಜಪಾನ್ನಲ್ಲಿ ಐಟಿ ಮೂಲ ಸೌಕರ್ಯಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಈಗಾಗಲೇ 9.20 ಲಕ್ಷ ಟೆಕ್ಕಿಗಳಿದ್ದು, ಇನ್ನು 2 ಲಕ್ಷ ಟೆಕ್ಕಿಗಳ ಬೇಡಿಕೆ ಇದೆ.
ಹೀಗಾಗಿ ಭಾರತೀಯ ಟೆಕ್ಕಿಗಳ ನೇಮಕಕ್ಕೆ ಜಪಾನ್ ಮುಂದಾಗಿದೆ ಅಂತ ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಜಂಟಿಯಾಗಿ ಏರ್ಪಡಿಸಿದ್ದ ಭಾರತ-ಜಪಾನ್ ವಾಣಿಜ್ಯ ಸಹಭಾಗಿತ್ವ ವಿಚಾರ ಸಂಕಿರಣದಲ್ಲಿ ಅವರು ಈ ವಿಷಯ ತಿಳಿಸಿದರು. ಜಪಾನ್ ಐಟಿ ವಲಯದಲ್ಲಿ ಪ್ರಗತಿಗೆ ಭಾರತದ ತಂತ್ರಜ್ಞರ ನೆರವು ಬಯಸುತ್ತಿದೆ. ಹಲವು ಜಪಾನಿ ಕಂಪನಿಗಳು ಅತ್ಯಾಧುನಿಕ ಐಟಿ ತಂತ್ರಜ್ಞಾನವನ್ನು ಬಯಸುತ್ತಿವೆ. ಜಪಾನ್ ಉತ್ಪಾದನಾ ವಲಯದಲ್ಲಿ ಆಧುನಿಕ ಟೆಕ್ನಾಲಜಿಯನ್ನು ಹೊಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಇನ್ನೂ ಮುಂದುವರಿಯಬೇಕಾಗಿದೆ. ಭಾರತೀಯರಿಗೆ ವೀಸಾ ನಿಯಮಗಳನ್ನು ಜಪಾನ್ ಸಡಿಲಿಸಿದೆ ಎಂದರು.
Comments