Report Abuse
Are you sure you want to report this news ? Please tell us why ?
ವಿಶ್ವ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ ಮಾಜಿ ಸಚಿವ

09 Mar 2018 12:06 PM | General
361
Report
ವಿಶ್ವ ಮಹಿಳಾ ದಿನಾಚರಣೆಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಅವರು ತಮ್ಮ ಮಡದಿಯೊಂದಿಗೆ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಸಚಿವರು ತಮ್ಮ ಪ್ರೀತಿಯ ಮಡದಿ ಲಕ್ಷ್ಮಿ ಅರುಣಾ ಅವರನ್ನು ಹೂವಿನಿಂದ ಅಲಂಕಾರ ಮಾಡಿದ ಸೈಕಲ್ ಸಾರೋಟದಲ್ಲಿ ಕೂರಿಸಿ ತಾವೂ ಅವರ ಜೊತೆ ಸವಾರಿ ಮಾಡಿದ್ದಾರೆ.
ಜೊತೆಗೆ ಪೋಟೋ ತೆಗೆಸಿಕೊಂಡು ಅದನ್ನು ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಹಾಕಿ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಮಡದಿಯೊಂದಿಗೆ ಈ ರೀತಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿಕೊಂಡ ಸಚಿವರ ಫೇಸ್ ಬುಕ್ ಪೋಸ್ಟ್ ನ್ನು ಹಲವರು ಶೇರ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Edited By
Shruthi G

Comments