ಕ್ಯಾಡ್ಬರಿ ಉತ್ಪನ್ನಗಳಲ್ಲಿ ಎಚ್‌ಐವಿ ಸೋಂಕಿದೆಯೇ..? ಇಲ್ಲಿದೆ ಎಕ್ಸ್ ಕ್ಲ್ಯೂಸಿವ್ ಮಾಹಿತಿ

ಇತ್ತೀಚಿಗೆ ಕ್ಯಾಡ್ಬರಿ ಚಾಕ್ ಲೇಟ್ ನಲ್ಲಿ ಎಚ್ ಐವಿ ಸೊಂಕಿತ ವ್ಯೆಕ್ತಿಯ ರಕ್ತ ಸೇರಿಕೊಂಡಿದೆ ಆದ್ದರಿಂದ ಕ್ಯಾಡ್ಬರಿ ಉತ್ಪನ್ನಗಳನ್ನೂ ಬಳಸ ಬೇಡಿ ಎಂಬ ವಿಡಿಯೋ ವೈರೆಲ್ ಆಗಿತ್ತು.
ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ದೃಶ್ಯದ ಫೋಟೋವೊಂದನ್ನು ಲಗತ್ತಿಸಿ, 'ಈತನೇ ಕ್ಯಾಡ್ಬರಿ ಉತ್ಪನ್ನಗಳಲ್ಲಿ ತನ್ನ ರಕ್ತವನ್ನು ಸೇರಿಸಿರುವ ವ್ಯಕ್ತಿ. ಮುಂದಿನ ಕೆಲವಾರಗಳ ಕಾಲ ಕ್ಯಾಡ್ಬರಿ ಉತ್ಪನ್ನಗಳನ್ನು ಸೇವಿಸಬೇಡಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ರಕ್ತವು ಈ ಉತ್ಪನ್ನಗಳಲ್ಲಿ ಸೇರಿದೆ. ಆತನಿಗೆ ಎಚ್‌ಐವಿ ಸೋಂಕಿತ್ತು. ಇದನ್ನು ಬಿಬಿಸಿ ವರದಿ ಮಾಡಿದೆ. ಈ ಸಂದೇಶವನ್ನು ಪ್ರತಿಯೊಬ್ಬರಿಗೂ ಕಳಿಸಿ' ಎಂದು ಹೇಳಲಾಗಿದೆ. ಇದನ್ನು ಶೇರ್ ಕೂಡ ಮಾಡಲಾಗುತ್ತಿದೆ. ಆದರೆ ನಿಜಕ್ಕೂ ಎಚ್‌ಐವಿ ಸೋಂಕಿತ ವ್ಯಕ್ತಿಯ ರಕ್ತವು ಕ್ಯಾಡ್ಬರಿ ಉತ್ಪನ್ನಗಳಲ್ಲಿ ಸೇರಿದೆಯೇ ಎಂದು ಹುಡುಕಹೊರಟಾಗ ಹಳೆಯ ಯಾವುದೋ ಫೋಟೋವನ್ನು ಬಳಸಿಕೊಂಡು ಈ ರೀತಿಯ ವದಂತಿಯನ್ನು ಹಬ್ಬಿಸಲಾಗಿದೆ ಎಂಬುದು ತಿಳಿಯುತ್ತದೆ.
ಎಲ್ಲೂ ಈ ರೀತಿಯ ಯಾವುದೇ ದೂರು ದಾಖಲಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂದೇಶದೊಂದಿಗೆ ಲಗತ್ತಿಸಿರುವ ಫೋಟೋ ನೈಜೀರಿಯಾದ್ದು. 2014ರ ಏ.14 ರಂದು ನೈಜೀರಿಯಾದಲ್ಲಿ ನಡೆದ ನ್ಯಾನ್ಯಾ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಒಗ್ವೆಷೆ ಅಬುಜಾನನ್ನು ಸುಡಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ದೃಶ್ಯ. ನೈಜೀರಿಯಾದ ಮಾಜಿ ಸೈನಿಕನಾಗಿದ್ದ ಒಗ್ವೆಷೆ ಅನಂತರದಲ್ಲಿ ಐವರು ಸಹಚರರ ಜೊತೆಗೂಡಿ ನ್ಯಾನ್ಯಾ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಘಟನೆಯ ನಂತರ ವಿದೇಶಕ್ಕೆ ಪರಾರಿರಾಗಿದ್ದ ಒಗುಚಿಯನ್ನು ಸುಡಾನ್ನಲ್ಲಿ ಬಂಧಿಸಲಾಗಿತ್ತು. ಹಾಗಾಗಿ ಕ್ಯಾಡ್ಬರಿಯಲ್ಲಿ ಎಚ್‌ಐವಿ ಸೋಂಕಿತನ ರಕ್ತ ಸೇರಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸಾಭೀತಾಗಿದೆ.
Comments