ಸಿಎಂ ಸಿದ್ದರಾಮಯ್ಯ, ಗೃಹ ಮಂತ್ರಿ ರಾಜೀನಾಮೆ ನೀಡಬೇಕು : ಎಚ್ ಡಿಕೆ ಆಗ್ರಹ

ಲೋಕಾಯುಕ್ತ ನ್ಯಾಯಮೂರ್ತಿಯವರಿಗೆ ವ್ಯಕ್ತಿಯೊಬ್ಬ ಚಾಕು ಹಾಕಿ ಹತ್ಯೆಗೆ ಯತ್ನಿಸಿದ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗರೆಡ್ಡಿ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಕಾಸಸೌಧದ ಪಕ್ಕದಲ್ಲೇ ಇಂತಹ ಘಟನೆ ನಡೆದಿದೆ ಎಂದರೆ, ಅದಕ್ಕೆ ಪ್ರೇರಣೆ ಏನಾದ್ರು ಇದೆಯೇ ಹೇಳಿ. ಇದನ್ನೆಲ್ಲ ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕಾಯುಕ್ತವನ್ನು ಈ ಮೊದಲೇ ಸಾಯಿಸಿದ್ದ ಸರ್ಕಾರ ಈಗ ಹೆಸರಿಗಷ್ಟೇ ಆ ಸಂಸ್ಥೆಯನ್ನು ಉಳಿಸಿಕೊಂಡಿದೆ. ಹೀಗೆ ಪ್ರತಿಯೊಂದು ವಿಷಯದಲ್ಲಿ ಸರ್ಕಾರ ಭಂಡತನ ಪ್ರದರ್ಶಿಸಲಿ,ಮುಂದೈತಿ ಮಾರಿಹಬ್ಬ ಎಂದು ಎಚ್ಚರಿಸಿದರು.
Comments