ಚಿನ್ನ ಖರೀದಿದಾರರಿಗೆ ಸಿಕ್ಕಿದೆ 'ಸಿಹಿ' ಸುದ್ದಿ

09 Mar 2018 10:14 AM | General
525 Report

ಹಬ್ಬ ಹರಿದಿನಗಳಲ್ಲಿ ಚಿನ್ನ ಖರೀದಿಸುವುದು ಒಳ್ಳೆಯದು ಅದರಲ್ಲೂ ಯುಗಾದಿ ಹಬ್ಬ ಅಂದ್ರೆ ಹಿಂದುಗಳಿಗೆ ಹೊಸವರ್ಷವೆಂದೇ ಕರೆಯುವ ಯುಗಾದಿ ಹಬ್ಬದಂದು ಚಿನ್ನ ಖರೀದಿಸಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ.ಆದರೆ ಚಿನ್ನದ ಬೆಲೆ ಗಗನ ಮುಟ್ಟಿದೆ ಎಂದು ಚಿಂತಿಸುತ್ತಿರುವವರಿಗೆ ಇಲ್ಲಿದೆ ಸಿಹಿಸುದ್ದಿ.

ಯುಗಾದಿ ಹಬ್ಬಕ್ಕೂ ಮುನ್ನ ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಏರಿಳಿತದ ಹಾದಿಯಲ್ಲಿದ್ದ ಚಿನ್ನ-ಬೆಳ್ಳಿ ದರದಲ್ಲಿ ಈಗ ಕೊಂಚ ಇಳಿಕೆಯಾಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 220 ರೂ. ಇಳಿಕೆಯಾಗಿದ್ದು, ಬೆಳ್ಳಿ ಪ್ರತಿ ಕೆ.ಜಿ. ಗೆ 400 ರೂ. ಇಳಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ನಾಣ್ಯ ತಯಾರಿಕೆ ಮತ್ತು ಕೈಗಾರಿಕಾ ಘಟಕಗಳಿಂದಲೂ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ. ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 31,450 ರೂ. ಹಾಗೂ ಬೆಳ್ಳಿಯ ನೂರು ನಾಣ್ಯಗಳ ಖರೀದಿ ದರ 75,000 ರೂ. ಗಳಾಗಿದೆ.

Edited By

Shruthi G

Reported By

Madhu shree

Comments