ಬೆಂಗಳೂರಿಗೆ ಬಂತು ಹೆಲಿಕಾಪ್ಟರ್ ಏರ್ ಆಂಬ್ಯುಲೆನ್ಸ್
ಬೆಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಗೆ ಎಷ್ಟು ಪರಿಹಾರ ಹುಡುಕಿದರೂ ಸಹ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅಲ್ಲದೆ ಆಂಬುಲೆನ್ಸ್ ನಲ್ಲಿ ಅದೆಷ್ಟು ರೋಗಿಗಿಗಳು ಅಸುನೀಗಿದ್ದಾರೆ. ಇದಕ್ಕೆಲ್ಲ ಪರಿಹಾರ ಸೂಚಿಸಲೆಂದು ಸರ್ಕಾರ ಕೆಲವು ಯೋಜನೆಗನ್ನು ಜಾರಿಗೆ ತಂದಿದೆ.
ಇತ್ತೀಚೆಗಷ್ಟೆ ಬೆಂಗಳೂರಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿಗಳ ಹಾರಾಟ ಶುರುವಾಗಿತ್ತು. ಸದ್ಯದಲ್ಲೇ ಏರ್ ಆಂಬ್ಯುಲೆನ್ಸ್ ಗೆ ಹೆಲಿಪ್ಯಾಡ್ ಕೂಡ ಲಭ್ಯವಾಗಲಿದೆ. ಬಿಬಿಎಂಪಿ, ಬೆಂಗಳೂರಿನಲ್ಲಿ ಒಟ್ಟು 8 ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡ್ತಿದೆ. ನಿರೀಕ್ಷೆಯಂತೆ ಕಾಮಗಾರಿ ನಡೆದ್ರೆ ಜುಲೈ ಅಂತ್ಯದೊಳಗೆ ಹೆಲಿಪ್ಯಾಡ್ ಗಳು ಸಿದ್ಧವಾಗಲಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ತಲುಪಿಸಲು ಈ ಹೆಲಿಪ್ಯಾಡ್ ಗಳನ್ನು ಬಳಸಿಕೊಳ್ಳಲಾಗುತ್ತದೆ.
ಪೆಬ್ರವರಿ 28ರಂದು ಮಂಡನೆಯಾದ ಬಜೆಟ್ ನಲ್ಲಿ ವೈದ್ಯಕೀಯ ಸೇವೆಗಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಪ್ರಕಟಿಸಿತ್ತು. ಒಟ್ಟು 8 ವಲಯಗಳಲ್ಲಿ ಈಗಾಗ್ಲೇ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಸ್ಥಳವನ್ನು ಕೂಡ ಗುರುತಿಸಲಾಗಿದೆ. ಸದ್ಯದಲ್ಲೇ ಯೋಜನೆಯ ಟೆಂಡರ್ ಕೂಡ ಕರೆಯಲಾಗುವುದು. ಹೆಲಿಪ್ಯಾಡ್ ಬಳಸುವ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತದೆ. ಇದನ್ನು ಏರ್ ಆಂಬ್ಯುಲೆನ್ಸ್ ಸೇವೆಗಾಗಿ ಬಳಸಿಕೊಳ್ಳಲಾಗುವುದು ಅಂತಾ ಬಿಬಿಎಂಪಿ ತಿಳಿಸಿದೆ.
Comments