ಮದ್ಯ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ..!

ಕೋಕಾ ಕೋಲಾ ಕಂಪನಿ ಇದೇ ಮೊದಲ ಬಾರಿಗೆ ಆಲ್ಕೋಹಾಲಿಕ್ ಪಾನೀಯವನ್ನು ಬಿಡುಗಡೆ ಮಾಡ್ತಿದೆ. ಜಪಾನ್ ನಲ್ಲಿ ಕೋಕಾ ಕೋಲಾ ಕಂಪನಿಯ ಮದ್ಯ ಮಾರುಕಟ್ಟೆಗೆ ಬರಲಿದೆ. ಈ ಪಾನೀಯ ಜಪಾನ್ ನಲ್ಲಿ ಜನಪ್ರಿಯವಾಗಿರುವ ಚು-ಹಿ ಮಾದರಿಯಲ್ಲಿರಲಿದೆ.
ಇದರಲ್ಲಿ ಅಲ್ಕೋಹಾಲ್, ಸ್ಪಾರ್ಕ್ಲಿಂಗ್ ವಾಟರ್, ಫ್ಲೇವರ್ ಹಾಗೂ ಸಾಂಪ್ರದಾಯಿಕ ಪಾನೀಯ ಶೊಚುವನ್ನು ಬಳಸಲಾಗುತ್ತದೆ. ದ್ರಾಕ್ಷಿ, ಸ್ಟ್ರಾಬೆರಿ, ಕಿವಿ ಮತ್ತು ವೈಟ್ ಪೀಚ್ ಫ್ಲೇವರ್ ಗಳಲ್ಲಿ ಚುಹಿ ಲಭ್ಯವಿದೆ. ಶೊಚು ಬದಲು ವೋಡ್ಕಾ ಕೂಡ ಬಳಸಬಹುದು. ಜಪಾನ್ ನ ಜನಪ್ರಿಯ ಕಂಪನಿಗಳ ಪಾನೀಯದಲ್ಲಿ ಶೇ.9 ರಷ್ಟು ಅಲ್ಕೋಹಾಲ್ ಇರುತ್ತದೆ. ಹಾಗಾಗಿ ಕೋಕಾ ಕೋಲಾ ಕೂಡ ತನ್ನ ಪಾನೀಯದಲ್ಲಿ ಅದೇ ಪ್ರಮಾಣದ ಅಲ್ಕೋಹಾಲ್ ಬಳಸುವ ಸಾಧ್ಯತೆ ಇದೆ. ಕೋಕಾ ಕೋಲಾದ ಮದ್ಯ ಗ್ರಾಹಕರಿಗೆ ವಿಶಿಷ್ಟ ಅನುಭವ ಕೊಡಲಿದೆ ಅನ್ನೋದು ಕಂಪನಿಯ ವಿಶ್ವಾಸ.
Comments