ವೋಡಾಫೋನ್ ಗ್ರಾಹಕರಿಗೆ ಬಂಪರ್ ಆಫರ್ ..!

ಗ್ರಾಹಕರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಟೆಲಿಕಾಂ ಕಂಪನಿಗಳು ಬಹಳಷ್ಟು ಆಫರ್ ಗಳನ್ನೂ ನೀಡುತ್ತಿದೆ. ಉಳಿದ ಕಂಪನಿಗಳಿಗೆ ಟಕ್ಕರ್ ನೀಡಲು ವೋಡಾಫೋನ್ ಹೊಸ ಆಫರ್ ಶುರು ಮಾಡಿದೆ.
ಈ ಪ್ಲಾನ್ ನಲ್ಲಿ ಕಂಪನಿ 299 ರೂಪಾಯಿಗೆ ಪ್ರತಿ ದಿನ 1ಜಿಬಿ ಡೇಟಾ, ಉಚಿತ ಕರೆ ಹಾಗೂ 100 ಎಸ್ ಎಂ ಎಸ್ ನೀಡ್ತಿದೆ. ವೋಡಾಫೋನ್ 2ಜಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಪ್ಲಾನ್ ಶುರು ಮಾಡಿದೆ. ಅಂದ್ರೆ ಈ ಪ್ಲಾನ್ ನಲ್ಲಿ 2ಜಿ ಡೇಟಾ ಸಿಗಲಿದೆ. ಈ ಪ್ರೀಪೇಡ್ ಪ್ಲಾನ್ ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಎಸ್ ಟಿ ಡಿ ಹಾಗೂ ಸ್ಥಳೀಯ ಕರೆಗಳು ಗ್ರಾಹಕರಿಗೆ ಉಚಿತವಾಗಿ ಸಿಗಲಿವೆ. ಕಂಪನಿ ಕರೆಗೆ ಮಿತಿ ನಿಗಧಿಪಡಿಸಿದೆ. ಗ್ರಾಹಕ 250 ನಿಮಿಷ ಮಾತ್ರ ಉಚಿತವಾಗಿ ಮಾತನಾಡಬಹುದಾಗಿದೆ. ಅಂದ್ರೆ ಒಂದು ವಾರದಲ್ಲಿ 1000 ನಿಮಿಷ ಮಾತನಾಡಬಹುದು. ಈ ಪ್ಲಾನ್ ವ್ಯಾಲಿಡಿಟಿ 56 ದಿನಗಳವರೆಗೆ ಇರಲಿದೆ.
Comments