ಮಾಸ್ತಿಗುಡಿ ನಿರ್ಮಾಪಕನ ಜೊತೆ ಕಾಂಗ್ರೆಸ್ ಶಾಸಕರ ಪುತ್ರಿ ಪರಾರಿ

ಇತ್ತೀಚಿಗೆ ಪ್ರೀತಿ ಮೈ ಅಪ್ಪ ಅಮ್ಮ ಒಪ್ಪದಿದ್ದರೆ ಮನೆ ಬಿಟ್ಟು ಹೋಗುವ ಘಟನೆಗಳು ಇಂದಿನ ಕಾಲಕ್ಕೆ ಸರ್ವೇ ಸಾಮಾನ್ಯವಾಗಿಬಿಟ್ಟದೆ. ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್ ಗೌಡ ಅವರು ಕಾಂಗ್ರೆಸ್ ಶಾಸಕರೊಬ್ಬರ ಪುತ್ರಿ ಜೊತೆ ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ.
ಸುಂದರ್ಗೌಡ ಹಾಗೂ ಕಾಂಗ್ರೆಸ್ ಶಾಸಕರೊಬ್ಬರ ಪುತ್ರಿ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಈ ನಡುವೆ ಇವರಿಬ್ಬರ ಪ್ರೀತಿಗೆ ಶಾಸಕರು ವಿರೋಧ ವ್ಯಕ್ತ ಮಾಡಿದ್ದರಿಂದ ಪರಸ್ಪರ ನಿನ್ನೆ ಬೆಳಗ್ಗೆ ಶಾಸಕರ ಪುತ್ರಿ ಸುಂದರ್ ಗೌಡ ಜೊತೆಗೆ ಪರಾರಿಯಾಗಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಕಾಂಗ್ರೆಸ್ ಶಾಸಕರ ಪರವಾಗಿ ವ್ಯಕ್ತಿಯೊಬ್ಬರು ದೂರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದ್ದು ಪೊಲೀಸರು ಎರಡು ತಂಡಗಳಾಗಿ ಹುಡುಕಾಟ ನಡೆಸಿದ್ದಾರೆ
Comments