ಬಿಎಸ್‌ವೈ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? : ಎಚ್ ಡಿಕೆ ಪ್ರಶ್ನೆ
ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಮಾಡಿದ್ದೇನು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್ ಒಪ್ಪಂದ ರದ್ದು ಮಾಡಿ ಇಡೀ ಯೋಜನೆ ರಾಜ್ಯ ಸರ್ಕಾರದ ವಶಕ್ಕೆ ಪಡೆಯಲು ನಿರ್ಣಯ ಕೈಗೊಳ್ಳಲು ಮುಂದಾದಾಗ ಯಡಿಯೂರಪ್ಪ ನೇತೃತ್ವದ 16 ಸಚಿವರು ಸಂಪುಟ ಸಭೆಗೆ ಸಂಜೆಯಾದರೂ ಬರಲಿಲ್ಲ ಮರುದಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನೈಸ್ ಮುಖ್ಯಸ್ಥರಿಂದ ಉಡುಗೊರೆ ಪಡೆದಿದ್ದು ಯಾರಿಗೂ ತಿಳಿದಿಲ್ಲವೇ? ಈಗ ಯಡಿಯೂರಪ್ಪ ನೈಸ್ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ದೇವೇಗೌಡರು ಖೇಣಿ ವಿರುದ್ಧ ಹೋರಾಟ ಮಾಡಿದ್ದಲ್ಲ. ಅದು ನೈಸ್ ಸಂಸ್ಥೆಯ ಅಕ್ರಮಗಳ ವಿರುದ್ಧ ಹೋರಾಟ. ಅವರೆಂದೂ ರಾಜಿಗೆ ಒಳಗಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಧಾನಸಭೆಯಲ್ಲಿ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಣಯ ಮಂಡಿಸೋಣ ಎಂದಾಗಲೂ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಇಬ್ಬರಿಗೂ ನೈತಿಕತೆಯಿಲ್ಲ ಎಂದು ಟೀಕಿಸಿದರು.
Comments