ಆನ್‍ಲೈನ್ ಶಾಪಿಂಗ್'ನಲ್ಲಿ ಮೋಸ ನೀವು ಮೋಸ ಹೋಗದಿರಲು ಈ ವೆಬ್ ಸೈಟ್ ಬಳಸಿ

ಆನ್‍ಲೈನ್ ಶಾಪಿಂಗ್ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೂ ಫುಲ್ ಸ್ಟಾಪ್ ಇಡುವ ಸಲುವಾಗಿ ಬೆಂಗಳೂರು ಮೂಲದ ಇಂಡಿಯನ್ ಮನಿ.ಕಾಂ ಸಂಸ್ಥೆ ಐ ಆಯಮ್ ಚೀಟೆಡ್.
ಆನ್‍ಲೈನ್ ಶಾಪಿಂಗ್ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೂ ಫುಲ್ ಸ್ಟಾಪ್ ಇಡುವ ಸಲುವಾಗಿ ಬೆಂಗಳೂರು ಮೂಲದ ಇಂಡಿಯನ್ ಮನಿ.ಕಾಂ ಸಂಸ್ಥೆ ಐ ಆಯಮ್ ಚೀಟೆಡ್.ಕಾಂ ಎಂಬ ವೆಬ್‍ಸೈಟ್ ಆರಂಭಿಸಿದೆ. ಐ ಆಯಮ್ ಚೀಟೆಡ್.ಕಾಂ ಸಂಸ್ಥೆ ಉಚಿತ ಆನ್‍ಲೈನ್ ವೆಬ್‍ಸೈಟ್ ಆಗಿದ್ದು, ಸಮಸ್ಯೆ ಎದುರಿಸಿದ ಗ್ರಾಹಕ ಯಾವುದೇ ಬ್ರಾಂಡ್ ಬಗ್ಗೆ ನಿರ್ದಿಷ್ಟ ದೂರು ದಾಖಲಿಸಬಹುದು.ಖರೀದಿಸಿದ ಬ್ರಾಂಡೆಡ್ ವಸ್ತು ಸರಿಯಿಲ್ಲ. ಆ ಸಂಸ್ಥೆಯವರು ಸರಿಯಾದ ಸರ್ವೀಸ್ ನೀಡುತ್ತಿಲ್ಲ ಅಥವಾ ಆ ಕಂಪೆನಿ ಪ್ರತಿನಿಧಿ ವರ್ತನೆ ಸರಿಯಿಲ್ಲ. ಹೀಗೆ ಹತ್ತು ಹಲವು ಮಾದರಿಯ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಐ ಆಯಮ್ ಚೀಟೆಡ್.ಕಾಂ ವೇದಿಕೆಯಾಗಿ ಪರಿಣಮಿಸಿದೆ. ಯಾವುದೇ ಕಂಪೆನಿಯ ಬಗ್ಗೆ ಗ್ರಾಹಕ ದೂರು ದಾಖಲಿಸಿದ ಕೂಡಲೇ ಈ .ಕಾಂನ ನಿರ್ವಾಹಕರು ನೇರವಾಗಿ ನಿರ್ದಿಷ್ಟ ಸಂಸ್ಥೆಯ ಗಮನಕ್ಕೆ ತರುತ್ತಾರೆ. ಸಾಮಾನ್ಯವಾಗಿ ಐದು ಕೆಲಸದ ದಿನಗಳಲ್ಲಿ ದೂರು ಎದುರಿಸುತ್ತಿರುವ ಕಂಪೆನಿ ಗ್ರಾಹಕನ ಸಮಸ್ಯೆಗೆ ಉತ್ತರಿಸುತ್ತದೆ. ಒಂದೊಮ್ಮೆ ದೂರು ದಾಖಲಿಸಿದ ಕಂಪೆನಿ ಯಾವುದೇ ಪ್ರತಿಕ್ರಿಯೆ ಎಂದಾದಲ್ಲಿ ದೂರು ದಾಖಲಿಸಿದ ಗ್ರಾಹಕನಿಗೆ ಕಾನೂನು ಸಲಹೆಯನ್ನು ಐ ಆಯಮ್ ಚೀಟೆಡ್.ಕಾಂ ನೀಡುತ್ತದೆ.
ಲಕ್ಷಾಂತರ ಕಂಪೆನಿಗಳು ಮತ್ತು ಗ್ರಾಹಕರು ಈ .ಕಾಂನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉದಾಹರಣೆಗೆ ವಿಮಾನ ಪ್ರಯಾಣಕ್ಕೆ ಆನ್‍ಲೈನ್‍ನಲ್ಲಿ ಹಣ ನೀಡಿ ಟಿಕೆಟ್ ಬುಕಿಂಗ್ ಮಾಡಿರ್ತೀರಿ. ಆದರೆ ಆ ಸಂಸ್ಥೆಯವರು ನಿಮ್ಮ ಟಿಕೆಟ್ ಅನ್ನು ಕನ್‍ಫರಂ ಮಾಡಿರಲ್ಲ. ಈ ಬಗ್ಗೆ ಪ್ರತಿನಿಧಿಗಳು ಸಮರ್ಪಕ ಪ್ರತಿಕ್ರಿಯೆ ನೀಡಲ್ಲ. ಇ-ಮೇಲ್‍ಗೂ ಉತ್ತರ ನೀಡಲ್ಲ. ಇಂತಹ ಸಮಸ್ಯೆ ಎದುರಾದಾಗ ನೆರವಿಗೆ ಬರಲಿದೆ ಐ ಆಯಮ್ ಚೀಟೆಡ್.ಕಾಂ. ಇಂಡಿಯನ್ ಮನಿ.ಕಾಂನ ನಿರ್ಮಾತೃ ಸಿ.ಎಸ್.ಸುಧೀರ್ ಅವರು ಪರಿಣಿತರೊಂದಿಗೆ ಚರ್ಚಿಸಿ ಆನ್‍ಲೈನ್ ವಂಚನೆ ತಪ್ಪಿಸುವ ಉದ್ದೇಶದಿಂದ ಐ ಆಯಮ್ ಚೀಟೆಡ್.ಕಾಂ ಆರಂಭಿಸಿದ್ದು ಸಿಲಿಕಾನ್ ಸಿಟಿಯಲ್ಲಿ ಆನ್‍ಲೈನ್ ವಂಚನೆಗೊಳಗಾಗುವ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
Comments