ಕೆಪಿಎಸ್‍ಸಿ ಅಭ್ಯರ್ಥಿಗಳಿಗೆ ಬಿಗ್ ಶಾಕ್ ಕೊಟ್ಟ ಪೊಲೀಸರು

ಕೆಪಿಎಸ್ ಸಿಯಲ್ಲಿ ಮೋಸ ನಡೆಯುತ್ತಿದೆ, ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಮೊದಲಿಂದಲೂ ಕೂಡ ಕೇಳಿ ಬರುತ್ತಿದೆ. ಈ ನಡುವೆ ಸರ್ಕಾರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಕೆ.ಪಿ.ಎಸ್.ಸಿ ಮೂಲಕ ಸರ್ಕಾರಿ ಹುದ್ದೆಯನ್ನು ಪಡೆಯುವ ಕನಸು ಕಾಣುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳನ್ನು ನಿದ್ದೆಗೆಡಿಸುವ ಸುದ್ದಿಯೊಂದು ಸಿಕ್ಕಿದೆ.
ಹೌದು. ಅಕ್ರಮ ತಂಡವೊಂದು ಕೆಪಿಎಸ್ಸಿ ಪರಿಕ್ಷಾ ತರಬೇತಿ ಕೇಂದ್ರಗಳಿಗೆ ಹೋಗಿ ಹಣವಂತ ಅಭ್ಯರ್ಥಿಗಳನ್ನು ಗುರುತಿಸಿ ಉದ್ಯೋಗ ದೊರಕಿಸಲು ಸಹಾಯ ಮಾಡುವುದಾಗಿ ಆಮಿಷ ಒಡ್ಡುತ್ತಿತ್ತು. ಪರೀಕ್ಷೆ ವೇಳೆ ಸೂಕ್ಷ್ಮ ಇಯರ್ ಫೋನ್ ಮೂಲಕ ಉತ್ತರ ನೀಡುವುದಾಗಿ ಇಲ್ಲದಿದ್ರೆ ಉತ್ತರ ಪತ್ರಿಕೆ ಖಾಲಿ ಬಿಟ್ಟು ಬಂದರೆ ಉತ್ತರ ತಾವು ತುಂಬಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಗೆ ಆಸೆ ಹುಟ್ಟಿಸಿ ಅವರಿಂದ ಸುಮಾರು 10 ಲಕ್ಷ ರೂಪಾಯಿವರೆಗೆ ಹಣ ಪಡೆಯುತ್ತಿದ್ದರು.
ಅದರಂತೆ ಫೆ. 25ರಂದು ನಡೆದ ಎಫ್ಡಿಎ ಪರೀಕ್ಷೆಯಲ್ಲಿ ಹಲವರಿಗೆ ಸಹಾಯ ಕೂಡಾ ಮಾಡಿದ್ದರು ಎನ್ನಲಾಗಿದೆ.ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಚಂದ್ರಕಾಂತ್ ಮತ್ತು ಭೀಮರಾಯ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಅವರ ದೂರವಾಣಿ ಕರೆ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸ್ತಿದ್ದಾರೆ. ಕಲಬುರಗಿ ಮಾತ್ರವಲ್ಲದೇ ವಿಜಯಪುರ, ಶಿವಮೊಗ್ಗ, ಬೆಂಗಳೂರಲ್ಲೂ ಜಾಲ ಹಬ್ಬಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ದೊರೆತಿದೆ.
Comments