ನ್ಯಾ.ವಿಶ್ವನಾಥ ಶೆಟ್ಟಿ ಪ್ರಕರಣ ಕುರಿತು ರಾಜ್ಯ ಸರಕಾರದ ವಿರುದ್ಧ ಎಚ್ ಡಿಡಿ ಆಕ್ರೋಶ

07 Mar 2018 3:40 PM | General
421 Report

ಲೋಕಾಯುಕ್ತ ಕಚೇರಿಯಲ್ಲಿಯೇ ನ್ಯಾ.ವಿಶ್ವನಾಥ ಶೆಟ್ಟಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಯಾವ ರಾಜ್ಯದಲ್ಲಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?, ನಾವಿಂದು ಗೂಂಡಾ ರಾಜ್ಯದಲ್ಲಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಮೊದಲೇ ಸಾಯಿಸಿದೆ. ಈಗ ಲೋಕಾಯುಕ್ತರನ್ನೇ ಇರಿಯುತ್ತಾರೆಂದರೆ ಏನಿದು? ಎಂದು ಅವರು ರಾಜ್ಯಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By

Shruthi G

Reported By

Shruthi G

Comments