ವಾಟ್ಸ್‌ಆಪ್-ಪೇಟಿಎಂಗೆ ಹಿಂದಿಕ್ಕಳಿರುವ ಗೂಗಲ್ ತೇಜ್ ...!!

ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪೇಟಿಎಂ ಸಹ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಪೇಟಿಎಂ ಇನ್ ಬ್ಯಾಕ್ಸ್ ಸೇವೆಯನ್ನ ಆರಂಭಿಸಿತ್ತು. ಇದು ಸಹ ವಾಟ್ಸ್‌ಆಪ್ ಸೆಡ್ಡು ಹೊಡೆಯುವ ಸಲುವಾಗಿಯೇ ನೀಡಿದ್ದ ಆಯ್ಕೆಯಾಗಿತ್ತು.
ಇದೇ ಮಾದರಿಯಲ್ಲಿ ಗೂಗಲ್ ತೇಜ್ ಆಪ್ ಸಹ ಪೇಟಿಎಂ ಇನ್ ಬಾಕ್ಸ್ ಮತ್ತು ವಾಟ್ಸ್‌ಆಪ್ ಗೆ ಸೆಡ್ಡು ಹೊಡೆಯುವ ಸಲುವಾಗಿ ತನ್ನ ಬಳಕೆದಾರರಿಗೆ ಚಾಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಫೇಸ್ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಒಂದು ಕಡೆ ತನ್ನ ಪೇಮೆಂಟ್ ಸೇವೆಯನ್ನು ಪರೀಕ್ಷೆ ಮಾಡುತ್ತಿರುವ ಮಾದರಿಯಲ್ಲಿಯೇ, ಗೂಗಲ್ ತೇಜ್ ಆಪ್ ಸಹ ತನ್ನ ಚಾಟ್ ಆಯ್ಕೆಯನ್ನು ಕೆಲವು ಬಳಕೆದಾರರಿಗೆ ನೀಡಿ ಪರೀಕ್ಷೆಯನ್ನು ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗೂಗಲ್ ತೇಜ್ ಆಪ್ ಬಳಕೆದಾರರು ಸರಳವಾಗಿ ಚಾಟಿಂಗ್ ಮಾಡುವ ಅವಕಾಶವನ್ನು ಗೂಗಲ್ ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ಪೇಮೆಂಟ್ ಆಪ್ ನಲ್ಲಿಯೇ ಬಳಕೆದಾರರು ಚಾಟಿಂಗ್ ಸಹ ಮಾಡಬಹುದಾಗಿದೆ. ಗೂಗಲ್ ತೇಜ್ ಬಳಕೆದಾರರು ಹೊಸ ಆಪ್ಡೇಟ್ ಅನ್ನು ಹೊಂದಿದ್ದರೇ ಮಾತ್ರವೇ ಈ ಚಾಟಿಂಗ್ ಸಾಧ್ಯವಾಗಲಿದೆ. ಚಾಟಿಂಗ್ ಆಪ್ ಮಾದರಿಯಲ್ಲಿ ಬಳಕೆಯಾಗದಿದ್ದರೂ, ಪೇಮೆಂಟ್ ಉದ್ದೇಶದಿಂದ ಮಾತು ಕತೆ ನಡೆಸಲು ಸಹಾಯಕಾರಿಯಾಗಿದೆ.
Comments