ಟಿವಿ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಮುಂದಾದ ಡಿಷ್ ಟಿವಿ

ಟಿವಿ ಕ್ಷೇತ್ರದಲ್ಲಿ ಇತ್ತೀಚಿಗೆ ಪೈಪೋಟಿ ಹೆಚ್ಚಿದ್ದು ಹೊಸ ಹೊಸ ಕ್ರಾಂತಿಗೆ ಮುಂದಾಗಿದೆ. ಇನ್ನೊಂದೆಡೆ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಜಿಯೋ, DTH ಕ್ಷೇತ್ರಕ್ಕೂ ಕಾಲಿಡುವ ಸಾಧ್ಯತೆ ಇದೆ, ಇದೇ ಸಂದರ್ಭದಲ್ಲಿ ರಿಲಯನ್ಸ್ ಮಾಲೀಕತ್ವದ ಬಿಗ್ ಟಿವಿ ಸಹ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಒಂದು ವರ್ಷದ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಹೊಸ ದೊಂದು ಪ್ರಯತ್ನಕ್ಕೆ ZEE ಮಾಲೀಕತ್ವದ ಡಿಷ್ ಟಿವಿ ಮುಂದಾಗಿದೆ. ತನ್ನ ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಡಿಷ್ ಟಿವಿ ತನ್ನ ಬಳಕೆದಾರರಿಗೆ HD ಟೆಕ್ನಾಲಜಿಯನ್ನು ಹೊಂದಿರುವ ಹೈ ಬ್ರಿಡ್ ಸೆಟಪ್ ಬಾಕ್ಸ್ ಗಳನ್ನು ನೀಡಲು ಮುಂದಾಗಿದೆ. ಇದರ ಮೂಲಕ ತನ್ನ ಬಳಕೆದಾರರು ಯಾವ ಚಾನಲ್ಗಳನ್ನು ಹೆಚ್ಚು ನೋಡುತ್ತಿದ್ದಾರೆ. ಮತ್ತು ಅವರ ಆಸಕ್ತಿದಾಯಕ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳವ ಪ್ಲಾನ್ ಮಾಡಿದೆ. ಇದರಿಂದ ಆದಾಯವನ್ನು ಗಳಿಸುವ ಯೋಜನೆ ರೂಪಿಸಿದೆ.
BARCಗೆ ಸ್ಪರ್ಧೆ:
ದೇಶದಲ್ಲಿ ಟಿವಿ ಚಾನಲ್ಗಳ ರೇಟಿಂಗ್ ಮಾಪನ ಮಾಡುವ BARC ನೊಂದಿಗೆ ಡಿಷ್ ಟಿವಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಇದರಿಂದಾಗಿ ತನ್ನ ವೀಕ್ಷಕರು ಯಾವ ಟಿವಿ ಚಾನಲ್ಗಳನ್ನು ಹೆಚ್ಚು ನೋಡಿದ್ದಾರೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಮುಂದಾಗಿದೆ.
TRP ವಿಧಾವವೇ ಬದಲು:
ಇದರಿಂದಾಗಿ ದೇಶಿಯ ಟಿವಿ ಮಾರುಕಟ್ಟೆಯಲ್ಲಿ ಹೊಸ ಅಲೆಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಸದ್ಯ ಕೆಲವೇ ಕೆಲವು ಮನೆಗಳಲ್ಲಿ ಮಾತ್ರವಿರುವ TRP ಮಾಪನಕ್ಕಿಂತ ಇದು ಹೆಚ್ಚು ಪರಿಣಾಮಕಾರಿಯಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
Comments