ರೈಲ್ವೆ ಪ್ರಯಾಣಿಕರ ಬಳಿ ಈ ಆಪ್ ಇದ್ರೆ ಸಾಕು ಸುಖಕರ ಪ್ರಯಾಣ ಮಾಡಬಹುದು..!
UTS ಎಂಬ ಹೆಸರಿನಲ್ಲಿ ಹೊಸದೊಂದು ಆಪ್ ಅನ್ನು ಬಿಡುಗಡೆ ಮಾಡಿರುವ ರೈಲ್ವೆ ಇಲಾಖೆಯೂ, ದಿನ ನಿತ್ಯ ರೈಲು ಸೇವೆಯನ್ನು ಬಳಸುವವರಿಗಾಗಿಯೇ ಈ ಆಪ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ಈ ಆಪ್ ಅನ್ನು ವಿನ್ಯಾಸ ಮಾಡಿದ್ದು, ಈ ಕುರಿತ ಮಾಹಿತಿಯೂ ಮುಂದಿನಂತಿದೆ.
ಗೂಗಲ್ ಪ್ಲೇ ಸ್ಟೋರಿನಲ್ಲಿ UTS ಎಂದು ಸರ್ಚ್ ಮಾಡಿದ ಸಂದರ್ಭದಲ್ಲಿ ಮೊದಲನೆದಾಗಿ ಕಾಣಿಸಿಕೊಳ್ಳುವ ಆಪ್ ಅನ್ನು ಆಂಡ್ರಾಯ್ಡ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.
ನಿತ್ಯ ಓಡಾಡುವವರಿಗೆ: ಮುಂಗಡವಾಗಿ ಟಿಕೇಟ್ ಬುಕ್ ಮಾಡದೆ ರೈಲಿನಲ್ಲಿ ಪ್ರಯಾಣಿಸಬೇಕಿದ್ದವರಿಗೆ ಮತ್ತು ನಿತ್ಯ ರೈಲಿನಲ್ಲಿ ಓಡಾಡುವವರಿಗೆ ಅನುಕೂಲವಾಗುವಂತೆ UTS ಎಂಬ ಹೆಸರಿನಲ್ಲಿ ಹೊಸದೊಂದು ಆಪ್ ಕಾರ್ಯಚರಣೆಯನ್ನು ಆರಂಭಿಸಿದೆ. ಇದು ಅನ್-ರಿಸರ್ವ್‌ಡ್ (ಮುಂಗಡ ಕಾಯ್ದಿರಿಸದ) ಟಿಕೆಟ್ ಪಡೆಯಲು ಅತ್ಯುತ್ತಮ ಆಪ್ ಆಗಿದೆ.
ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ: ನೀವು ಹೊರಡಲು ರೆಡಿಯಾಗಿರುವ ರೈಲಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಆದರೆ ಟೀಕೆಟ್ ಖರೀದಿಸಲುಯ ಉದ್ದದ ಕ್ಯೂ ಇರಲಿದೆ. ಹಾಗಾಗಿ ಈ ಆಪ್ ಇನ್ ಸ್ಟಾಲ್ ಮಾಡಿಕೊಂಡರೆ ನೀವು ಆಪ್ ನಲ್ಲಿಯೇ ಟಿಕೇಟ್ ಬುಕ್ ಮಾಡಿಕೊಳ್ಳಬಹುದು. ಅಲ್ಲದೇ ಪ್ಲ್ಯಾಟ್‌ಫಾರ್ಮ್ ಟಿಕೇಟ್ ಅನ್ನು ಆಪ್ ಮೂಲಕವೇ ಪಡೆದುಕೊಳ್ಳಬಹುದು.
ಎರಡು ಮಾದರಿಯ ಸೇವೆ: ಪೇಪರ್ ಲೈಸ್ ಮತ್ತು ಪೇಪರ್ ಸೇವೆ. ನೀವು ಆಪ್ ಮೂಲಕ ಟಿಕೇಟ್ ಬುಕ್ ಮಾಡುವ ಸಂದರ್ಭದಲ್ಲಿ ಟಿಕೇಟ್ ಇಲ್ಲದೇ ಸ್ಮಾರ್ಟ್‌ಫೋನ್‌ನಲ್ಲಿಯೇ ವರ್ಚುವಲ್ ಟಿಕೇಟ್ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ರೈಲ್ವೇ ನಿಲ್ದಾಣದ ಬಳಿ ಇರಬೇಕು, ಇನ್ನೊಂದು ಟೆಕೇಟ್ ಬುಕ್ ಮಾಡಿಕೊಂಡು ಪ್ರಿಂಟ್ ಪಡೆದು ಪ್ರಯಾಣಿಸಬೇಕಾಗಿದೆ.
Comments