ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆಂದು ಕೋರ್ಟ್ ಮೆಟ್ಟಿಲೇರಿರುವ ಕಾಳಿ ಸ್ವಾಮೀಜಿ..!



ದಿನ ನಿತ್ಯವೂ ಪ್ರಸಾರವಾಗುವ ಜಾಹಿರಾತುಗಳು ಇತರರ ಮನಸ್ಸಿಗೆ ಹೆಗ್ಗೂ ಐತಿಹಾಸಿಕ ನಂಬಿಕೆಗೆ ಭಂಗ ತರಬಾರದು ಆದರೆ ಇಲ್ಲೆಂದು ಜಾಹಿರಾತು ನಾಡಪ್ರಭು, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಗೆ ಅವಮಾನ ಮಾಡಲಾಗಿದೆ.
ಹೌದು, ನಿತ್ಯವೂ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಜಾಹೀರಾತಿನ ವಿಚಾರವಾಗಿ ಪೋತಿಸ್ ಸಂಸ್ಥೆಯ ವಿರುದ್ಧ ಋಷಿಕುಮಾರ ಸ್ವಾಮೀಜಿ ಸದ್ಯಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಮೆಟ್ಟಿಲೇರಿದ್ದೇಕೆ? ಎಂಬುದರ ಬಗ್ಗೆ ಸ್ವತಃ ಋಷಿಕುಮಾರ ಸ್ವಾಮೀಜಿಯವರೇ ಉತ್ತರ ಕೊಟ್ಟಿದ್ದಾರೆ. ನಾಡ ಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ನಾಲ್ಕೂ ದಿಕ್ಕಿಗೆ ಗಡಿ- ಗೋಪುರಗಳನ್ನು ಕಟ್ಟಿದರು. ಎಲ್ಲ ಕಡೆ ಕೆರೆ- ಕಟ್ಟೆಗಳನ್ನು ಕಟ್ಟಿಸಿದರು. ಆದರೆ ಒಂದೇ ಒಂದು ಕೊರತೆ ಎಂದರೆ ಅವರ ಪತ್ನಿಗೆ ಒಳ್ಳೆಯ ಸೀರೆ ಸಿಗುವ ಒಂದು ಮಳಿಗೆಯನ್ನು ಮಾತ್ರ ಕಟ್ಟಿಸಲಾಗಲಿಲ್ಲ. ಕೊನೆಗೆ ತಮಿಳು ನಾಡು ಮೂಲದ ಪೋತಿಸ್ ನವರು ಒಂದು ಮಳಿಗೆಯನ್ನು ಕಟ್ಟಿಸಿದರು.
ಆಗ ಕೆಂಪೇಗೌಡರ ಪತ್ನಿ ಹಾಗೂ ಅವರ ಆಸ್ಥಾನದವರು ಸಂತೋಷಗೊಂಡರು. ಆ ಜಾಹೀರಾತಿನಲ್ಲಿ ಕೇವಲ ಯಾರೋ ಒಬ್ಬ ರಾಜನ ಆಸ್ಥಾನವನ್ನು ತೋರಿಸಬಹುದಾಗಿತ್ತು. ಆದರೆ ಕೆಂಪೇಗೌಡರ ಹೆಸರು ಬಳಸಿಕೊಳ್ಳುವ ಮೂಲಕ ಬೆಂಗಳೂರಿನೊಂದಿಗೆ ನಮ್ಮದು ಐತಿಹಾಸಿಕ ಸಂಬಂಧ ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಪೋತಿಸ್ ನವರು ಮಾಡಿದ್ದಾರೆ ಎಂಬುದು ಸ್ವಾಮೀಜಿ ವಾದ. ಹಾಗೆಯೇ ಕನ್ನಡಿಗರ ವಿರೋಧ ಎದುರಾಗದಂತೆ ಪುನೀತ್ ರಾಜಕುಮಾರ್ ಅವರನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಂತಹದ್ದೊಂದು ಸೂಕ್ಷ್ಮ ಅರ್ಥವಾಗದೆ ಹೋದದ್ದು ದುಃಖದ ಸಂಗತಿ ಎನ್ನುತ್ತಾರೆ ಶ್ರೀಗಳು. ಈ ಜಾಹೀರಾತು ದಿನಕ್ಕೆ ಐವತ್ತು ಸಾರಿ ಎಲ್ಲಾ ವಾಹಿನಿಗಳಲ್ಲೂ ಪ್ರಸಾರವಾಗುತ್ತಿದೆ.
Comments