ಅಮೆಜಾನ್ ಗ್ರಾಹಕರಿಗೆ ಭರ್ಜರಿ ರಿಯಾಯಿತಿ..!

06 Mar 2018 11:52 AM | General
779 Report

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನ ತನ್ನತ ಸೆಳೆಯಲು ಒಂದಲ್ಲ ಒಂದು ಆಫರ್ ಗಳನ್ನೂ ನೀಡಿ ಗ್ರಾಹಕರನ್ನು ಸಂತೃಪಿ   ಪಡಿಸುತ್ತಾ ಬಂದಿದೆ. ಅಮೆಜಾನ್ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದು, ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ಆಫರ್ ಘೊಷಣೆ ಮಾಡಿದೆ.

ಮಾರ್ಚ್ 5 ರಿಂದ 8ನೇ ತಾರೀಖಿನವರೆಗೂ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳ ಮೇಲೆ ಕಾರ್ನೆಲ್ ಆಫರ್ ನೀಡಿದ್ದು, ರೂ.8000ದ ವರೆಗೂ ಕ್ಯಾಷ್ಬ್ಯಾಕ್ ನೀಡಲು ಮುಂದಾಗಿದೆ. ಇದೆ ಕೆಲವು ದಿನಗಳ ಹಿಂದೆ ಆಪಲ್ ಐಫೋನ್ ಮೇಲೆ ಭಾರೀ ಆಫರ್ ಘೋಷಣೆ ಮಾಡಿದ್ದ ಅಮೆಜಾನ್, ಈ ಬಾರಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಸದ್ಯ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದವರಿಗೆ ಇದು ಬೆಸ್ಟ್ ಸಮಯ ಎನ್ನಲಾಗಿದ್ದು, ಉತ್ತಮ ಬೆಲೆಗೆ ಸ್ಮಾರ್ಟ್ಫೋನ್ ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ರೂ.8000 ಕ್ಯಾಷ್ ಬ್ಯಾಕ್:  ಅಮೆಜಾನ್ ನಲ್ಲಿ ಮಾರ್ಚ್ 5 ರಿಂದ 8 ನೇ ತಾರೀಖಿನವರೆಗೂ ಸ್ಯಾಮ್ಸಂಗ್ ಕಾರ್ನಿಯಲ್ ಸೇಲ್ ನಡೆಯಲಿದ್ದು, ಇದರಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಖರೀದಿದಾರರಿಗೆ ಅಮೆಜಾನ್ ರೂ.8000 ಕ್ಯಾಷ್ ಬ್ಯಾಕ್ ನೀಡಲಿದೆ. ಅದುವೇ ಅಮೆಜಾನ್ ಪೇ ಬ್ಯಾಲೆನ್ಸ್ ಆಗಲಿದೆ.

Edited By

Shruthi G

Reported By

Madhu shree

Comments