ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ ಕೊಟ್ಟ ಬಿಎಂಟಿಸಿ..!
ಇತ್ತೀಚೆಗಷ್ಟೇ ಬಿಎಂಟಿಸಿ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬೇರೆಡೆಗೆ ಸಂಚರಿಸಲು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಡಿಕ್ಕೊಟ್ಟ ಬೆನ್ನಲ್ಲೇ ಈಗ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದೆ.
ಬಿಎಂಟಿಸಿ ಬಸ್ ಗಳಲ್ಲಿ ಸಂಚರಿಸುವ 2.50 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರವು ಮುಂದಾಗಿದ್ದು, ಮಾರ್ಚ್ 13 ರಂದು ಈ ಪಾಸ್ ಗಳ ವಿತರಣೆಯಾಗಲಿದೆ. ಒಂಟಿ ಮಹಿಳೆಯರು ನಡೆದುಕೊಂಡು ಹೋಗುವ ಸ್ಥಳದಲ್ಲಿ ಅವರ ಕೋರಿಕೆಯಂತೆ ಬಸ್ ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು. ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ನವರು ಹೆಚ್ಚು ದರ ವಿಧಿಸುವುದನ್ನು ನಿಯಂತ್ರಿಸಲಾಗುವುದು. ಈ ಸಂಬಂಧ ಏಕರೂಪ ದರ ನಿಗದಿಗೆ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ರೇವಣ್ಣ ಹೇಳಿದರು.
Comments