ಈ ವಿಮಾನದಲ್ಲಿ ಪ್ರಯಾಣಿಸ ಬೇಕಾದ್ರೆ ಬಟ್ಟೆ ಬಿಚ್ಚಿ ಹೋಗ ಬೇಕು..! ಇದು ಯಾವ ಕಂಪನಿ ಗೋತ್ತಾ...?

05 Mar 2018 5:29 PM | General
641 Report

ಇತ್ತೀಚೆಗಿನ ಎಲ್ಲ ಏರ್ ಲೈನ್ಸ್ ಕಂಪನಿಗಳು ನೂತನ ರೀತಿಯ ರಿಯಾಯಿತಿಯನ್ನು ನೀಡುತ್ತವೆ. ಅಲ್ಲದೆ ಪ್ರತಿಯೊಂದುಏರ್ ಲೈನ್ಸ್ ಕಂಪನಿಗಳು ತನ್ನದೇ ಚೌಕ್ಕಟಿನಲ್ಲಿ ಕೆಲವು ರೂಲ್ಸ್ ಗಳನ್ನೂ ಮಾಡಿರುತ್ತದೆ. ಉದಾಹರಣೆಗೆ ತನ್ನ ಕಂಪನಿ ಹೆಸರಿನ ಬಟ್ಟೆ ಧರಿಸುವಂತದ್ದು, ಈ ರೀತಿಯ ರೂಲ್ಸ್ ಗನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಏರ್ ಲೈನ್ಸ್ ತನ್ನದೇ ಆದ ಶೈಲಿಯಲ್ಲಿ ರೂಲ್ಸ್ ಒಂದನ್ನು ಮಾಡಿಕೊಂಡಿದೆ,ಏನಪ್ಪಾ ಅಂದ್ರೆ ಈ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುವವರು ಬಟ್ಟೆ ಧರಿಸುವಂತಿಲ್ಲ. ಅಚ್ಚರಿ ಪಡಬೇಡಿ ಆದ್ರೆ ಇದು ಸತ್ಯ..!

ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ. ಆದರೆ ಬೋರ್ಡಿಂಗ್ನಲ್ಲಿ ಎಲ್ಲ ಪ್ರಯಾಣಿಕರು ಬಟ್ಟೆಧರಿಸಿರುತ್ತಾರೆ. ವರದಿಯಾಗಿರುವ ಪ್ರಕಾರ ಜರ್ಮನಿಯ ಟ್ರಾವೆಲ್ ಏಜೆನ್ಸಿಯೊಂದು ಇಂತಹ ಹುಚ್ಚು ಸಾಹಸಕ್ಕಿಳಿದೆ. ನ್ಯೂಡ್ ಏರ್ ಲೈನ್ಸ್ ನ್ನು  ಲಾಂಚ್ ಮಾಡಿದೆ.  ಈ ವಿಮಾನದಲ್ಲಿ ಬಿಕಿನಿ ಧರಿಸಿದ ಏರ್ ಹೋಸ್ಟರ್ಸ್ ಗಳಿದ್ದಾರೆ. ಕಂಪೆನಿಯ ಸಿಇಒ ನಗುಎನ್ ಪುವೋಂಗ್ ಏರ್ಲೈನ್ಸಕಂಪೆನಿ ತಾನು ಜನಪ್ರಿಯನಾಗಲು ಏನಾದರೊಂದು ಮಾಡುತಿರುತ್ತದೆ ಎಂದು ಹೇಳಿದ್ದಾರೆ. ಹೀಗೆ ಮಾಡುವುದರಿಂದ ಪ್ರಯಾಣಿಕರಿಗೆ ಪ್ರಯಾಣ ಸಂತಸ ಮತ್ತು ಸ್ಮರಣೀಯವಾಗಲಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ ಭಾರತದಲ್ಲಿ ಇಂತಹ ಏರ್ಲೈನ್ಸ್ ಶುಭಾರಂಭಗೊಳ್ಳುವ ಸಾಧ್ಯತೆಇಲ್ಲ.

Edited By

venki swamy

Reported By

Madhu Sree

Comments