ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಚಮಕ್ ..!

ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಲ್ಲದೇ, ಮಾಹಿತಿ ಕೇಳಿದ ಪೊಲೀಸರಿಗೇ ಚಮಕ್ ಕೊಟ್ಟ ಘಟನೆ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಕಾರ್ಪೊರೇಷನ್ ಸಿಗ್ನಲ್ ಬಳಿ ಹಲಸೂರು ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸಂಜಯ್ ಕಿರಣ್ ಎಂಬಾತ ಕುಡಿದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ.
ಪೊಲೀಸರು ನಿನ್ನ ಹೆಸರೇನು ಎಂದು ಕೇಳಿದಾಗ ಸಿದ್ದರಾಮಯ್ಯ ಎಂದು ಉತ್ತರ ಕೊಟ್ಟಿದ್ದಾನೆ. ಎಲ್ಲಿ ಕೆಲಸ ಮಾಡುತ್ತೀರಿ ಎಂದು ಕೇಳಿದಾಗ ಭೂಮಿ ಮೇಲೆ ಎಂದು ಉತ್ತರಿಸಿದ್ದಾನೆ. ಇಷ್ಟೇ ಅಲ್ಲದೇ ನಾಳೆಯಿಂದ ನಿಮಗೆಲ್ಲಾ ಏನು ಮಾಡುತ್ತೀನಿ ನೋಡುತ್ತಾ ಇರಿ ಎಂದ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.
Comments