ಮಾರ್ಚ್ 31ರೊಳಗೆ ಈ ಕೆಲಸ ತಪ್ಪದೆ ಮಾಡಿ..!

ನಿಮ್ಮ ಎಲ್ ಐ ಸಿ ಪಾಲಿಸಿಗಳ ಸಂಖ್ಯೆಯನ್ನು ಪಟ್ಟಿ ಮಾಡಿಕೊಳ್ಳಿ. ಆಧಾರ್ ಮತ್ತು ಪಾನ್ ಕಾರ್ಡ್ ನಿಮ್ಮ ಎಲ್ ಐ ಸಿ ಪಾಲಿಸಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಪಾಲಿಸಿದಾರರು ಆನ್ ಲೈನ್ ಅಥವಾ ಆಫ್ ಲೈನ್ ಮುಖಾಂತರ ಲಿಂಕ್ ಮಾಡಬಹುದು.
ಆಫ್ ಲೈನ್ ನಲ್ಲಿ ಲಿಂಕ್ ಮಾಡಲು ಇಚ್ಛಿಸಿದಲ್ಲಿ ಒಂದು ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅದನ್ನು ಎಲ್ ಐ ಸಿ ಕಚೇರಿಗೆ ನೀಡಬೇಕು. ಆನ್ ಲೈನ್ ನಲ್ಲಿ ಎಲ್ ಐ ಸಿ ಪಾಲಿಸಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡೋದು ಹೇಗೆ ಅನ್ನೋದನ್ನು ನೋಡೋಣ.
LIC ವೆಬ್ ಸೈಟ್ ಗೆ ಲಾಗಿನ್ ಆಗಿ. ಹೋಮ್ ಪೇಜ್ ನಲ್ಲಿರೋ ಆಧಾರ್, ಪಾನ್ ಲಿಂಕಿಂಗ್ ಆಪ್ಷನ್ ಕ್ಲಿಕ್ ಮಾಡಿ.
ಅಲ್ಲಿ ಲಿಂಕ್ ಮಾಡಲು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಅದನ್ನು ಸರಿಯಾಗಿ ಓದಿಕೊಳ್ಳಿ.
UIDAIನಲ್ಲಿ ದಾಖಲಿಸಿದ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಅನ್ನು ಕೂಡ ನಮೂದಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಆಗಿರದೇ ಇದ್ದಲ್ಲಿ ಸಮೀಪದ ಎಲ್ ಐ ಸಿ ಕಚೇರಿಗೆ ಭೇಟಿ ಕೊಟ್ಟು , ಅಲ್ಲಿಯೇ ಲಿಂಕ್ ಮಾಡಿಸಿ.
ನೀವು ಭರ್ತಿ ಮಾಡಿದ ವಿವರಗಳನ್ನೆಲ್ಲ ಪರಿಶೀಲಿಸಿ ಪ್ರೊಸೀಡ್ ಬಟನ್ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಪಾಲಿಸಿ ಸಂಖ್ಯೆ, ಪಾನ್ ಸಂಖ್ಯೆ ಇವನ್ನೆಲ್ಲ ನಮೂದಿಸಬೇಕು.
ಗೆಟ್ ಓಟಿಪಿ ಲಿಂಕ್ ಎಂಬ ಆಪ್ಷನ್ ಕ್ಲಿಕ್ ಮಾಡಿದ್ರೆ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ. ಫಾರ್ಮ್ ಸಬ್ ಮಿಟ್ ಮಾಡುತ್ತಿದ್ದಂತೆ ನಿಮಗೆ ಮೆಸೇಜ್ ಬರುತ್ತದೆ.
UIDAI ವೆರಿಫಿಕೇಶನ್ ಬಳಿಕ ನಿಮಗೆ ಎಸ್ ಎಂ ಎಸ್ ಅಥವಾ ಮೇಲ್ ಕಳಿಸಲಾಗುತ್ತದೆ. ಎಲ್ ಐ ಸಿ ಪಾಲಿಸಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ.
Comments