ಭರ್ಜರಿ ಹೋಳಿ ಆಚರಣೆ ಮಾಡಿದ ಧೋನಿ ಪುತ್ರಿ ಜೀವಾ
ದೇಶದೆಲ್ಲೆಡೆ ಹೋಳಿ ಸಂಭ್ರಮ ಮನೆಮಾಡಿದೆ. ಬಣ್ಣಗಳಲ್ಲಿ ಜನ ಮಿಂದೇಳ್ತಿದ್ದಾರೆ. ಸೆಲೆಬ್ರಿಟಿಗಳು, ಕ್ರಿಕೆಟಿಗರು, ಚಿತ್ರತಾರೆಯರು ಎಲ್ಲರೂ ರಂಗಿನಾಟ ಆಡೋದು ವಿಶೇಷ. ಸದ್ಯ ಇಂಟರ್ನೆಟ್ ನಲ್ಲಿ ಸಖತ್ ಸದ್ದು ಮಾಡ್ತಿರೋದು ಧೋನಿ ಮಗಳ ಹೋಳಿ ಆಚರಣೆ.
ಇನ್ ಸ್ಟಾಗ್ರಾಮ್ನಲ್ಲಿ ಜೀವಾಳ ಹ್ಯಾಪಿ ಹೋಳಿ ಪೋಸ್ಟ್ ಕೂಡ ವೈರಲ್ ಆಗಿದೆ. ಬಣ್ಣಗಳಲ್ಲಿ ಮಿಂದೆದ್ದಿರೋ ಜೀವಾ ಹೂವಿನ ಮಧ್ಯೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಇನ್ ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಾಗಿನಿಂದ್ಲೂ ಜೀವಾ ಸ್ಟಾರ್ ಆಗಿಬಿಟ್ಟಿದ್ದಾಳೆ. ಹೋಳಿ ಪೋಸ್ಟ್ ಅನ್ನು 24 ಗಂಟೆಗಳೊಳಗೆ 64,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಈ ಹಿಂದೆ ಕೂಡ ಜೀವಾಳ ಹಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದವು.
Comments