BSNL ಗ್ರಾಹಕರಿಗೊಂದು ಮುಖ್ಯ ಸೂಚನೆ

03 Mar 2018 10:26 AM | General
467 Report

ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಗ್ರಾಹಕರಿಗೊಂದು ಮಾಹಿತಿ ಇಲ್ಲಿದೆ. ಬಿ.ಎಸ್.ಎನ್.ಎಲ್. ಗ್ರಾಹಕರು ತಮ್ಮ ಮೊಬೈಲ್ ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಲು IVRS No 14546 ಗೆ ಕರೆ ಮಾಡಬಹುದಾಗಿದೆ.

ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರಗಳಲ್ಲಿ, ಬಿ.ಎಸ್.ಎನ್.ಎಲ್. ಫಾಂಚೈಸಿ ಮಳಿಗೆಗಳಲ್ಲಿಯೂ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬಹುದಾಗಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಮಾರ್ಚ್ 31 ರೊಳಗೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

Edited By

Shruthi G

Reported By

Madhu shree

Comments