ಅಂಬಾನಿ ಧಮಾಕಾ! 'ರಿಲಯನ್ಸ್ ಬಿಗ್ ಟಿ.ವಿ ಕೊಟ್ಟ ಬಿಗ್ ಆಫರ್ ..!
ಜಿಯೋ' ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್, 'ಜಿಯೋ ಡಿ.ಟಿ.ಹೆಚ್.' ಸೇವೆ ನೀಡುವುದಾಗಿ ಹೇಳಿತ್ತು. ಇದಕ್ಕಿಂತ ಮೊದಲೇ 'ರಿಲಯನ್ಸ್ ಬಿಗ್ ಟಿ.ವಿ.' ಮೂಲಕ ಬಿರುಗಾಳಿ ಎಬ್ಬಿಸಲು ಮುಂದಾಗಿದೆ.ರಿಲಯನ್ಸ್ ಬಿಗ್ ಟಿ.ವಿ.ಯೋಜನೆಯನ್ನು ಪರಿಚಯಿಸಲಾಗಿದ್ದು, ಸೆಟ್ ಟಾಪ್ ಬಾಕ್ಸ್ ನೊಂದಿಗೆ ಹೆಚ್.ಡಿ. ವಾಹಿನಿಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
5 ವರ್ಷಗಳ ಕಾಲ 500 ಚಾನಲ್ ಗಳನ್ನು ನೀಡಲಾಗುವುದು. 1 ವರ್ಷದ ಅವಧಿಗೆ ಶುಲ್ಕ ಸಹಿತ ವಾಹಿನಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ. ಇದೀಗ ಇತರೆ ಕಂಪನಿಗಳನ್ನು ಹಿಂದಿಕ್ಕಿ ಬಿರುಸಿನಿಂದ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ ಮನರಂಜನೆ, ಸುದ್ದಿ ವಾಹಿನಿ, ಕ್ರೀಡೆ, ಕಾರ್ಟೂನ್ ಎಲ್ಲಾ ಸೇರಿ 500 ವಾಹಿನಿಗಳು 1 ವರ್ಷ ಉಚಿತವಾಗಿ ಸಿಗಲಿವೆ. ರಿಲಯನ್ಸ್ ಬಿಗ್ ಟಿ.ವಿ. ನಿರ್ದೇಶಕ ವಿಜೇಂದರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ರಿಲಯನ್ಸ್ ಬಿಗ್ ಟಿ.ವಿ. ಭಾರತದಲ್ಲಿ ಉಚಿತ ಸೇವೆ ನೀಡಲು ಸಜ್ಜಾಗಿದೆ ಎಂದು ಹೇಳಿದ್ದಾರೆ.
ಇದರಡಿ ಭಾರತದ ಪ್ರತಿ ಮನೆಯಲ್ಲಿಯೂ ಗುಣಮಟ್ಟದ ಹೋಮ್ ಎಂಟರ್ ಟೈನ್ ಮೆಂಟ್ ಆನಂದಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ರಿಲಯನ್ಸ್ ಬಿಗ್ ಟಿ.ವಿ. ಕಂಪನಿ ವೆಬ್ ಸೈಟ್ ನಲ್ಲಿ 499 ರೂ. ಪಾವತಿಸಿ ಸೆಟ್ ಟಾಪ್ ಬಾಕ್ಸ್ ಬುಕ್ ಮಾಡಬೇಕು. ಬಳಿಕ 1500 ರೂ. ಪಾವತಿಸಿ ಸಂಪರ್ಕವನ್ನು ಪಡೆಯಬಹುದು. 2 ನೇ ವರ್ಷದಿಂದ ಮಾಸಿಕ 300 ರೂ. ಕಡಿತ ಮಾಡುವ ಮೂಲಕ ಈ ಹಣವನ್ನು ಪಾವತಿ ಮಾಡಲಾಗುತ್ತದೆ. ಮಾಹಿತಿಗೆ www. Reliancedigitaltv.com ಸಂಪರ್ಕಿಸಬಹುದಾಗಿದೆ.
Comments