ಎಲ್ ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸೂಚನೆ

ಮಾರ್ಚ್ ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ಅಡುಗೆ ಅನಿಲ ದರದಲ್ಲಿ ಇಳಿಕೆಯಾಗಿದೆ. 2017 ರ ನಂತ್ರ ಇದೇ ಮೊದಲ ಬಾರಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ.
ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಎರಡೂ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಸಬ್ಸಿಡಿ ಸಿಲಿಂಡರ್ ಬೆಲೆ 2.50 ರೂಪಾಯಿ ಇಳಿದಿದೆ. ಮಾರ್ಚ್ ಒಂದರಿಂದಲೇ ನೂತನ ಬೆಲೆ ಜಾರಿಗೆ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 495.30 ರೂಪಾಯಿಯಿದ್ದ 14.2 ಕೆ.ಜಿ ಸಬ್ಸಿಡಿ ಸಿಲಿಂಡರ್ ಗೆ 493.09 ರೂಪಾಯಿಯಾಗಿದೆ.
ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. 14.2 ಕೆ.ಜಿ ಸಿಲಿಂಡರ್ ಬೆಲೆ 45.50 ರೂಪಾಯಿಯಿಂದ ಹಿಡಿದು 47 ರೂಪಾಯಿವರೆಗೆ ಇಳಿಕೆಯಾಗಿದೆ. ಬೆಲೆ ಇಳಿಕೆ ನಂತ್ರ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 689 ರೂಪಾಯಿಯಾಗಿದೆ. ಕೋಲ್ಕತ್ತಾ, ಚೆನ್ನೈ, ದೆಹಲಿ ಹಾಗೂ ಮುಂಬೈನಲ್ಲಿ ಸಿಲಿಂಡರ್ ಹೊಸ ಬೆಲೆಯ ಪಟ್ಟಿ ಲಭ್ಯವಾಗಿದ್ದು, ಇಂದಿನಿಂದಲೇ ಇಳಿಕೆ ದರ ಜಾರಿಗೆ ಬರಲಿದೆ.
Comments