ಕೈ ಶಾಸಕ ಗುತ್ತೆದಾರರ ಸ್ವಾಗತಕ್ಕೆ ದೇವೇಗೌಡ್ರು ಏನಂದ್ರು?
ಅಫ್ಜಲಪುರ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೆದಾರ ಇತ್ತೀಚೆಗೆ ಬೆಂಗಳೂರಿನ ತಮ್ಮ ಮನೆಗೆ ಬಂದು ಭೇಟಿಯಾಗಿದ್ದು ನಿಜ. ಆದರೆ, ಅವರು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಹೇಳಿದ್ದಾರೆ.
ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೌಡರಿಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೆದಾರ್ ಸ್ವಾಗತ ಕೋರಿ ಹಾಕಿರುವ ಕಟೌಟ್ ಬಗ್ಗೆ ಪ್ರತಿಕ್ರಿಯಿಸಿ, ಮಾಲಿಕಯ್ಯ ನನ್ನ ಆತ್ಮೀಯ ಸ್ನೇಹಿತರು. ತಾನು ಸಿಎಂ ಇದ್ದಾಗ ನನಗೆ ಬೆಂಬಲ ನೀಡಿದವರು. ಮುಂದೆ ನಾನು ದೆಹಲಿಗೆ ಹೋದ ಮೇಲೆ ನಮ್ಮ ಪಕ್ಷದಲ್ಲಿ ಅವರು ನೊಂದು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಕಾಂಗ್ರೆಸ್‌ನಲ್ಲಿ ಈಗ ನೋವು-ನಲಿವು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಗೆ ಬಂದು ಗಾಣಗಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ್ದರು. ಆದರೆ, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹೀಗಾಗಿ ಅವರು ನಮ್ಮ ಪಕ್ಷಕ್ಕೆ ಬರುವ ವಿಚಾರ ಈಗ ಅಪ್ರಸ್ತುತ ಎಂದು ಹೇಳಿದರು.ನಾವು ಹಳ್ಳಿ ಜನ. ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಪರ್ಸೆಂಟೇಜ್ ಮೇಲೆ ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ದೇವೇಗೌಡ, ಎರಡೂ ಪಕ್ಷದ ನಾಯಕರ ಭಾಷಾ ವೈಖರಿ ಕೇಳಿ ರಾಜ್ಯದ ಜನ ಸಂತೋಷ ಪಡುತ್ತಿದ್ದಾರೆ. ನಾವು ಹಳ್ಳಿಯ ರೈತರ ಮಕ್ಕಳು. ಅವರಂತೆ ಮಾತನಾಡಲು, ಅವರೊಂದಿಗೆ ಪೈಪೋಟಿ ನೀಡಲು ಬರುವುದಿಲ್ಲ ಎಂದು ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಿದರು
Comments