ಅಂತಿಮ ಯಾತ್ರೆಗೆ ಹೊರಟ ಶ್ರೀದೇವಿ ಪಾರ್ಥೀವ ಶರೀರ

ಬಾಲಿವುಡ್ ನಟಿ ಶ್ರೀದೇವಿಯವರು ನಮ್ಮನೆಲ್ಲ ಆಗಲಿ ಇಂದಿಗೆ ಐದು ದಿನಗಳು ಕಳೆದಿವೆ. ಆದರೆ ಅವರನೆನೆಪು ಮಾತ್ರ ಸದಾ ನಮ್ಮನ್ನು ಕಾಡುತ್ತಲೇ ಇರುತ್ತದೆ. ಇಂದು ಶ್ರೀದೇವಿಯವರ ಮೃತ ದೇಹ ಮುಂಬೈಗೆ ತರಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಎಲ್ಲ ತಯಾರಿ ಪೂರ್ಣಗೊಂಡಿದೆ.
ಬಿಳಿ ಹೂವಿನಿಂದ ಸಿಂಗಾರಗೊಂಡ ತೆರೆದ ವಾಹನದಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಮೆರವಣಿಗೆ ಸಾಗುತ್ತಿದೆ. ಮೆರವಣಿಗೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬೋನಿ ಕಪೂರ್, ಅರ್ಜುನ್ ಕಪೂರ್ ಸೇರಿದಂತೆ ಕುಟುಂಬಸ್ಥರೆಲ್ಲ ವಾಹನದಲ್ಲಿದ್ದಾರೆ. ಈ ಮಧ್ಯೆ ಶ್ರೀದೇವಿ ಅಂತಿಮ ಆಸೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ಶ್ರೀದೇವಿ ಆಸೆಯಂತೆ ಚಿನ್ನ ಲೇಪಿತ ಕಾಂಚಿವರಂನ ಕೆಂಪು ಸೀರೆಯನ್ನು ಶ್ರೀದೇವಿ ಪಾರ್ಥೀವ ಶರೀರಕ್ಕೆ ಉಡಿಸಲಾಗಿದೆ. ಶ್ರೀದೇವಿ ಮೃತ ದೇಹವನ್ನು ಸಿಂಗರಿಸಲಾಗಿದೆ. ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಗೌರವ ಸೂಚಿಸಲಾಗಿದೆ. 3.30ರ ಸುಮಾರಿಗೆ ವಿಲೆ ಪಾರ್ಲೆಯ ಪವನ ಹನ್ಸ್ ಸ್ಮಶಾನದಲ್ಲಿ ಶ್ರೀದೇವಿ ಅಂತ್ಯಕ್ರಿಯೆ ನಡೆಯಲಿದೆ. ಮುಂಬೈ ಸೆಲಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಿಂದ ಮೆರವಣಿಗೆ ಹೊರಟಿದೆ. ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಂಡಿದ್ದಾರೆ.
Comments