ಮೂರೇ ದಿನದಲ್ಲಿ ಪಾಸ್ಪೋರ್ಟ್ ಪಡೆಯಿರಿ...!
ಪಾಸ್ಪೋರ್ಟ್ ಮಾಡಿಸಲು ಕಛೇರಿಯಿನ ಕಚೇರಿಗೆ ಅಲೆಯುವ ಈ ಜಂಜಾಟಕ್ಕೆ ಎಷ್ಟು ಜನ ಬೇಸತ್ತು ಹೋಗಿದ್ದಾರೆ. ಅದು ಸಾಲದು ಎಂಬಂತೆ ಪಾಸ್ಪೋರ್ಟ್ ನ್ನು ಪಡೆಯಲು ತಿಂಗಳುಗಟ್ಟಲೆ ಕಾಯುವ ಕಾಲ ಈಗಿಲ್ಲ. ಇನ್ಮುಂದೆ ಕೇವಲ ಮೂರೇ ದಿನದಲ್ಲಿ ತತ್ಕಾಲ್ ಪಾಸ್ಪೋರ್ಟ್ ನಿಮ್ಮ ಕೈ ಸೇರಲಿದೆ.
ಸರ್ಕಾರ ಪಾಸ್ಪೋರ್ಟ್ ತಯಾರಿಸುವ ನಿಯಮವನ್ನು ಸುಲಭ ಮಾಡಿದೆ. ತಕ್ಷಣ ಪಾಸ್ಪೋರ್ಟ್ ಬಯಸುವವರು ಪ್ರಥಮ ದರ್ಜೆ ಅಧಿಕಾರಿಗಳಿಂದ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಾದ ಅವಶ್ಯಕತೆಯಿಲ್ಲ. ಕ್ರಿಮಿನಲ್ ರೆಕಾರ್ಡ್ ಇಲ್ಲದ ಅಫಿಡವಿಟ್ ಕೂಡ ಸ್ವತಃ ಘೋಷಿಸಲ್ಪಡುತ್ತದೆ. ಅಂದ್ರೆ ನೀವು ಸಹಿ ಹಾಕಿದ ಪ್ರಮಾಣ ಪತ್ರವನ್ನು ನೀಡಬಹುದು. ಆಧಾರ್ ಕಾರ್ಡ್ ಜೊತೆ ಗುರುತಿಗಾಗಿ ಎರಡು ದಾಖಲೆ ನೀಡಿದ್ರೆ ಸಾಕು. ಬ್ಯಾಂಕ್ ಪಾಸ್ ಬುಕ್, ಪೋಸ್ಟ್ ಆಫೀಸ್ ಪಾಸ್ಬುಕ್ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದಾದ್ರೂ ಎರಡನ್ನು ನೀಡಬಹುದು. ಎಲ್ಲ ದಾಖಲಾತಿ ಸೂಕ್ತವಾಗಿದ್ದರೆ ಕೇವಲ 3 ದಿನಗಳಲ್ಲಿ ನಿಮಗೆ ಪಾಸ್ಪೋರ್ಟ್ ಸಿಗಲಿದೆ. passportindia.gov.in ಪ್ರಕಾರ ಪೊಲೀಸ್ ಪರಿಶೀಲನೆಯಿಲ್ಲದ ಸಂದರ್ಭದಲ್ಲಿ ಒಂದೇ ದಿನದಲ್ಲಿ ನಿಮಗೆ ಪಾಸ್ಪೋರ್ಟ್ ಸಿಗಲಿದೆ.
Comments