ಜೋಗ್ ಫಾಲ್ಸ್ ನಲ್ಲಿ ಕಾಣೆಯಾಗಿದ್ದ ಜ್ಯೋತಿರಾಜ್ ಕೊನೆಗೂ ಪತ್ತೆ..!

ನಿನ್ನೆ ಜೋಗ್ ಫಾಲ್ಸ್ ನಲ್ಲಿ ಬೆಂಗಳೂರಿನ ಯುವಕನೋರ್ವ ಆತ್ಮ ಹತ್ಯೆ ಮಾಡಿಕೊಂಡಿದ್ದನೆಂದು 3 ಗಂಟೆಗೆ ನೀರಿಗಿಳಿದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ರಾತ್ರಿಯಾಗುತ್ತಾ ಬಂದರು ಅವರ ಸುಳಿವಿರಲಿಲ್ಲ ಹೀಗಾಗಿ ಜ್ಯೋತಿರಾಜ್ ರವರಿಗೆ ಏನಾಯಿತೋ ಎಂದು ಎಲ್ಲರು ಹೆದರಿದ್ದರು ಕೊನೆಗೂ ಜ್ಯೋತಿರಾಜ್ ರವರು ಪತ್ತೆಯಾಗಿದ್ದಾರೆ.
ಜ್ಯೋತಿರಾಜ್ ನಿನ್ನೆ ಸಂಜೆ ಜೋಗದಲ್ಲಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ಯುವಕನೊಬ್ಬ ಜಲಪಾತದಲ್ಲಿ ಬಿದ್ದು ಆತ್ಮಹತ್ಯೆಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ನಿನ್ನೆ ಮಧ್ಯಾಹ್ನ 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು.ಆದರೆ ಜೋಗದ ಪ್ರಪಾತಕ್ಕೆ ಇಳಿದಿದ್ದ ಕೋತಿರಾಜ್ ಸಂಜೆಯಾದರೂ ಮೇಲೆ ಬರದೇ ಇದ್ದಾಗ ಆತಂಕಗೊಂಡ ಜನರು ಹುಡಕಾಡಲು ಪ್ರಯತ್ನಿಸಿದ್ದಾರೆ. ಆದರೆ ಏನು ಪ್ರಯೋಜವಾಗಿರಲಿಲ್ಲ. ಇಂದು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಡ್ರೋನ್ ಕ್ಯಾಮಾರದಲ್ಲಿ ಜ್ಯೋತಿರಾಜ್ ಸೆರೆಯಾಗಿದ್ದು, ನಿಶಕ್ತಿಯಿಂದ ಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ. ನಿನ್ನೆಯಿಂದ ಆಹಾರವಿಲ್ಲದೆ ಬಳಲುತ್ತಿದ್ದ ಜ್ಯೋತಿರಾಜ್ ನಿಶಕ್ತಿಗೊಳಗಾಗಿದ್ದಾರೆ.
Comments