ಮುಂಬೈ ತಲುಪಿದ ನಟಿ ಶ್ರೀದೇವಿ ಮೃತ ದೇಹ
ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಅವರು ಹೃದಯಾಘಾತದ ನಂತರ ಆಯತಪ್ಪಿ ಬಾತ್ ಟಬ್ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ದೃಢ ಪಡಿಸಿದೆ. ಈ ಹಿನ್ನೆಲೆಯಲ್ಲಿ ನಟಿ ಶ್ರೀದೇವಿಯಾ ಮೃತ ದೇಹವನ್ನು ಎಲ್ಲ ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿ ನಂತರ ಅನಿಲ್ ಅಂಬಾನಿ ಒಡೆತನದ ವಿಶೇಷ ವಿಮಾನದಲ್ಲಿ ಶ್ರೀದೇವಿ ಮೃತದೇಹವನ್ನ ಮುಂಬೈಗೆ ತರಲಾಗಿದೆ.
ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ ಮತ್ತು ನಟ ಅನಿಲ್ ಕಪೂರ್, ಸಂಜಯ್ ಕಪೂರ್ ಹಾಜರಿದ್ದರು. ನಾಳೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಲೋಖಂಡ್ ವಾಲಾ ಕಾಂಪ್ಲೆಕ್ಸ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2ರಿಂದ ಸೆಲಬ್ರೇಶನ್ ಸ್ಫೋರ್ಟ್ಸ್ ಕ್ಲಬ್ನಿಂದ ಪಾರ್ಲೆ ಸೇವಾ ಸಮಾಜದವರೆಗೆ ಅಂತಿಮ ಯಾತ್ರೆ ನಡೆಲಿದ್ದು, 3.30ಕ್ಕೆ ಹಿಂದೂ ರುದ್ರಭೂಮಿಯಲ್ಲಿ ಶ್ರೀದೇವಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ. ಶ್ರೀದೇವಿ ಪಾರ್ಥಿವ ಶರೀರದ ದರ್ಶನಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಸ್ಯಅಂಡಲ್ ವುಡ್ ಸೇರಿದಂತೆ ದೇಶದ ವಿವಿಧೆಡೆಯಿಂಸ ಸಿನಿಮಾ ತಾರೆಯರು, ರಾಜಕಾರಣಿಗಳ ಆಗಮನದ ನಿರೀಕ್ಷೆ ಇದೆ.
Comments