ಕಾಂಗ್ರೆಸ್ ಗೆ ಶಾಕ್ ಕೊಟ್ಟ ಎಚ್.ಡಿ.ಕುಮಾರಸ್ವಾಮಿ..!!

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ನಡವಳಿಕೆಗೆ ಹೆಚ್ ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದವರೇ ಸುಮ್ಮನೆ ಕುಳಿತಿದ್ದಾರೆ. ಪ್ರಧಾನಿ ಮೋದಿ ಮಹಾದಾಯಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಅತ್ತ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಗೆದ್ದರೆ ಮಹದಾಯಿ ಬಗೆಹರಿಸುತ್ತೇವೆ ಎಂದು ಚೆಲ್ಲಾಟವಾಡುವ ಮಾತನಾಡುತ್ತಾರೆ. ಮತ್ತೊಂದೆಡೆ ರಾಹುಲ್ ಮಹದಾಯಿ ಹೋರಾಟಗಾರರನ್ನು ಸೌಜನ್ಯಕ್ಕೂ ಭೇಟಿ ಮಾಡದೆ ಪಲಾಯನ ಮಾಡಿದ್ದಾರೆ. ಇದೆಲ್ಲಾ ನೋಡಿದರೆ ಬಿಜೆಪಿ- ಕಾಂಗ್ರೆಸ್ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿವೆ ಎಂದು ಟೀಕಿಸಿದ್ದಾರೆ.
ರಾಜ್ಯಸಭಾ ಚುನಾವಣೆ ಒಂದು ಸೀಟು ಬಿಟ್ಟು ಕೊಡುವಂತೆ ಕಾಂಗ್ರೆಸ್ ಜೊತೆ ಮಾತುಕತೆ ನಡೆದಿದೆ.ಬಿಟ್ಟುಕೊಡದಿದ್ದರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಪಾಂಡವರು ಆಸ್ತಿ ಕೇಳಿದರೆ ಕೌರವರು ಕೊಡದೆ ನಾಶವಾಗಿದ್ದು ಗೊತ್ತಿದೆಯಲ್ಲ ಅದೇ ರೀತಿಯಾಗುತ್ತದೆ ಎಂದು ಉದಾಹರಣೆ ನೀಡಿದ್ದಾರೆ. ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಬಿಜೆಪಿ ರಾಜಕೀಯ ಪಕ್ಷಗಳು ಟೆಂಪಲ್ ರನ್ ನಡೆಸುತ್ತಿವೆ. ಆದರೆ, ನಾವು ಮೊದಲಿನಿಂದಲೂ ದೇವಸ್ಥಾನಕ್ಕೆ ಹೋಗುತ್ತೇನೆ.ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅವರ ಸಾಲ ಮನ್ನಾ ಮಾಡಿ ನೆರವಿಗೆ ಧಾವಿಸದೆ ಸತ್ತವರ ಮನೆ ಮುಂದೆ ಮುಷ್ಡಿ ಅಕ್ಕಿ ಬೇಡುತ್ತಿರುವ ಕಾರ್ಯಕ್ರಮ ಹಾಕಿಕೊಂಡಿರುವ ಬಿಜೆಪಿಗೆ ನಾಚಿಕೆಯೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
Comments