ದೇವೇಗೌಡರ  ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ

27 Feb 2018 3:56 PM | General
706 Report

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಶಾಸಕ ಎಚ್.ಡಿ. ರೇವಣ್ಣನವರ ಪುತ್ರ ಸೂರಜ್ ರೇವಣ್ಣರ ಮದುವೆ ಡೇಟ್ ಫಿಕ್ಸ್ ಆಗಿದೆ.ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಜೇಷ್ಠ ಪುತ್ರ ಡಾ. ಸೂರಜ್ ರೇವಣ್ಣ ಅವರಿಗೆ ಕಂಕಣ ಬಲ ಕೂಡಿಬಂದಿದೆ.

ಮಾರ್ಚ್ 04ರಂದು ಬೆಳಗ್ಗೆ 6.45ರಿಂದ 7.15 ರವರೆಗೆ ಮುಹೂರ್ತ ನಿಗದಿಯಾಗಿದೆ. ಬೆಂಗಳೂರು ಪ್ಯಾಲೇಸ್‌ನಲ್ಲಿ ಮದುವೆ ನೆರವೇರಲಿದೆ.ಸಾಗರಿಕ ರಮೇಶ್ ಅವರನ್ನು ಡಾ . ಸೂರಜ್ ವರಿಸಲಿದ್ದಾರೆ. ಸಾಗರಿಕ ರಮೇಶ್ ಅವರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಹುಳುವಾಡಿ ಜಿ. ರಮೇಶ್ ಅವರ ಪುತ್ರಿಯಾಗಿದ್ದಾರೆ.

Edited By

Shruthi G

Reported By

Shruthi G

Comments