3 ದಿನ ಕಳೆದರು ಇನ್ನು ಯಾಕೆ ಭಾರತಕ್ಕೆ ಬಂದಿಲ್ಲ ಶ್ರೀದೇವಿ ಪಾಥಿರ್ವ ಶರೀರ

ಹವಾ ಹವಾಯಿ ಖ್ಯಾತಿಯ ನಟಿ ಶ್ರೀದೇವಿ ಅವರು ಹೃದಯಾಘಾತದ ನಂತರ ಆಯತಪ್ಪಿ ಬಾತ್ ಟಬ್ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ದೃಢ ಪಡಿಸಿದೆ. ಶನಿವಾರ ರಾತ್ರಿ 11.30 ರ ಸುಮಾರಿಗೆ ಶ್ರೀದೇವಿ ಸಾವನ್ನಪ್ಪಿದ್ದು, 3 ದಿನ ಕಳೆದರೂ ಸಹ ಭಾರತಕ್ಕೆ ಅವರ ಮೃತದೇಹ ತರಲು ಸಾಧ್ಯವಾಗಿಲ್ಲ.
ಏಕೆಂದರೆ ಶ್ರೀದೇವಿಯವರ ಸಾವು ಹಲವರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಅನುಮಾನದ ಛಾಯೆ ಎಲ್ಲರನ್ನು ಆವರಿಸಿಕೊಂಡಿದೆ. ಮರಣೋತ್ತರ ಪರೀಕ್ಷೆ, ವಿಚಾರಣೆ ಹಾಗೂ ತನಿಖೆಯ ವಿವಿಧ ಹಂತಗಳನ್ನು ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪ್ರಜ್ಞೆ ತಪ್ಪಿ ಬಾತ್ ಟಬ್ ಗೆ ಬಿದ್ದು ಅವರು ಮೃತಪಟ್ಟಿದ್ದಾರೆ. ದೇಹದಲ್ಲಿ ಆಲ್ಕೋಹಾಲ್ ಅಂಶ ಕಂಡು ಬಂದಿದೆ ಎನ್ನಲಾಗಿದೆ. ದುಬೈ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದು, ಶೀಘ್ರವೇ ತನಿಖೆ ಪೂರ್ಣಗೊಳಿಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ. ಮೃತದೇಹವನ್ನು ತರಲು ಭಾನುವಾರವೇ ಖ್ಯಾತ ಉದ್ಯಮಿಯೊಬ್ಬರ ಜೆಟ್ ವಿಮಾನವನ್ನು ಕಳಿಸಲಾಗಿದೆ. ಅಧಿಕಾರಿಗಳು ಔಪಚಾರಿಕತೆ ಪೂರ್ಣಗೊಳಿಸಿ ಮೃತದೇಹ ನೀಡಲಿದ್ದು, ಇಂದು ಭಾರತಕ್ಕೆ ಶ್ರೀದೇವಿ ಮೃತದೇಹ ಬರುವ ನಿರೀಕ್ಷೆ ಇದೆ.
Comments