ಮೊಬೈಲ್ ವಾಲೆಟ್ ಬಳಕೆದಾರರಿಗೊಂದು ಸೂಚನೆ...!
ನಾಳೆ ಅಂದ್ರೆ ಫೆಬ್ರವರಿ 28 ರೊಳಗೆ ನೀವೂ ಬ್ಯಾಂಕ್ ಗೆ ಸಂಬಂಧಿಸಿದ ಈ ಕೆಲಸವನ್ನು ಮಾಡಿ ಮುಗಿಸಿ. ಇಲ್ಲವಾದ್ರೆ ದೊಡ್ಡ ಸಮಸ್ಯೆ ಎದುರಾಗಬಹುದು. ನಾವು ಹೇಳ್ತಿರೋದು ಮೊಬೈಲ್ ವಾಲಟ್ ನ ಕೆವೈಸಿ ಬಗ್ಗೆ. ಪೇಟಿಎಂ, ವೋಲಾಮನಿ. ಮೊಬಿಕ್ಲಿಕ್ ಅಥವಾ ಯಾವುದೇ ಮೊಬೈಲ್ ವಾಲೆಟ್ ಬಳಸುತ್ತಿದ್ದರೆ ಅವಶ್ಯವಾಗಿ ಇದನ್ನು ಓದಿ.
ವಾಸ್ತವವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಿಪೇಯ್ಡ್ ವಾಲೆಟ್ ಗ್ರಾಹಕರು ಕೆವೈಸಿ ಪೂರ್ಣಗೊಳಿಸುವ ಗಡುವನ್ನು ವಿಸ್ತರಿಸದಿರಲು ನಿರ್ಧರಿಸಿದೆ. ಕೆವೈಸಿ ಪೂರ್ತಿಗೊಳಿಸಲು ಕೊನೆ ದಿನಾಂಕ ಫೆಬ್ರವರಿ 28. ಈ ಹಿಂದೆ ಕೆವೈಸಿಗಾಗಿ ಡಿಸೆಂಬರ್ 31, 2017ನ್ನು ನಿಗದಿಪಡಿಸಲಾಗಿತ್ತು. ನಂತ್ರ ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿತ್ತು. ಒಂದು ವೇಳೆ ನಾಳೆಯೊಳಗೆ ಮೊಬೈಲ್ ಕೆವೈಸಿ ಮಾಡದಿದ್ದವರ ಅಕೌಂಟ್ ರದ್ದಾಗಲಿದೆ. ಗ್ರಾಹಕರನ್ನು ಕಳೆದುಕೊಳ್ಳಲು ಮುಂದಾಗದ ಮೊಬೈಲ್ ವಾಲೆಟ್ ಕಂಪನಿಗಳು ಗ್ರಾಹಕರಿಗೆ ಆಫರ್ ನೀಡ್ತಿವೆ. ಕೆಲ ಕಂಪನಿಗಳು Sodexo ಫುಡ್ ಕೂಪನ್ ನೀಡ್ತಾಯಿವೆ. ಇದನ್ನು ನಾಳೆಯೊಳಗೆ ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ Sodexo ಕಾರ್ಡ್ ಕೂಡ ಕೆಲಸ ಮಾಡುವುದಿಲ್ಲ.
Comments