ಜನರ ಮುಂದೆ ತಪ್ಪೊಪ್ಪಿಕೊಂಡ ಪ್ರಕಾಶ್ ರೈ
ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನನ್ನುಪ್ರಕಾಶ್ ರೈ ಹೊಗಳಿರುವ ವಿಡಿಯೋವೊಂದು ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದ ಬಗ್ಗೆ ಟ್ರೋಲ್ ಮಾಡಲಾಗಿತ್ತು.
ಇದರ ಕುರಿತು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ, ನಲಪಾಡ್ ಕೇಸಲ್ಲಿ ನಿಜಕ್ಕೂ ಮುಜುಗರವಾಗಿದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹಣ ನೀಡಿದ್ದರು. ಈ ಕ್ಷಣದಲ್ಲಿ ನಾನು ಇಂಥ ಯುವಕರು ಇರಬೇಕು ಎಂದು ಹೇಳಿದ್ದೆ, ಆದರೆ ಆತನ ಮನಸ್ಸಲ್ಲೊಬ್ಬ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ ಎಂದರು.
Comments