ಬಯಲಾಯ್ತು ಮಹಾನಗರ ಪೊಲೀಸರ ಯಡವಟ್ಟಿನ ಕಾರ್ಯವೈಖರಿ

ಮಹಾನಗರ ಪಾಲಿಕೆಯ ಒಂದಲ್ಲ ಒಂದು ಯಡವಟ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇಷ್ಟಾದರೂ ಸಹ ಎಚ್ಚೆತುಕೊಳ್ಳದ ಮಹಾನಗರ ಪಾಲಿಕೆಯ ನಡೆಗೆ ಜನರು ಬೇಸರ ವ್ಯೆಕ್ತಪಡಿಸಿದ್ದಾರೆ. ಇದೀಗ ಮಹಾ ನಗರ ಪೋಲೀಸರ ಯಡವಟ್ಟಿನ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿಯ ರಾಮನಗರದಲ್ಲಿ ವಾಸವಿರುವ ಗೂಡ್ಸ್ ಗಾಡಿಯ ಮಾಲೀಕ ಬಶೀರ್ ಅಹ್ಮದ್ ಮುರ್ಶಾಲ್ ಎಂಬುವವರ ಮನೆಗೆ ಫೆ.18ರಂದು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ್ದು, 100 ರೂ. ದಂಡ ವಿಧಿಸುವಂತೆಯೂ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ಅಂದ್ರೆ ನೋಟಿಸ್ನಲ್ಲಿ ತ್ರಿಚಕ್ರ ಎಂದು ನಮೂದಿಸುವ ಬದಲು, ದ್ವಿಚಕ್ರ ಎಂದು ನಮೂದಿಸಲಾಗಿದ್ದು, ದಂಡ ಪಾವತಿಸಬೇಕೆ? ಅಥವಾ ಬೀಡಬೇಕೆ? ಎಂಬ ಗೊಂದಲದಲ್ಲಿ ಗೂಡ್ಸ್ ಮಾಲೀಕರಿದ್ದಾರೆ.ಕೋಟ್ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ನೋಟಿಸ್ ಬರುತ್ತಿರವ ಮಾಹಿತಿ ಇದೆ. ಆದರೆ ನಾನು ಗೂಡ್ಸ್ ಚಾಲಕನಾಗಿದ್ದು, ಹೆಲ್ಮೆಟ್ ಧರಿಸಿಲ್ಲವೆಂದು ನೋಟಿಸ್ ಬಂದಿರುವುದು ವಿಪರ್ಯಾಸವೆಂದು ಬಶೀರ್ ಚಿಂತಿತನಾಗಿದ್ದಾನೆ.
Comments