ಮೈಸೂರು ಯದುವಂಶದ ಯುವರಾಜನಿಗೆ ನಾಮಕರಣ.....ಹೆಸರೇನು ಗೊತ್ತಾ?

25 Feb 2018 5:55 PM | General
399 Report

ಮೈಸೂರಿನ ಯದುವಂಶದ ಕುಡಿ, ಯುವರಾಜನ ನಾಮಕರಣ ಸಮಾರಂಭ ಸರಳವಾಗಿ ನೆರವೇರಿದ್ದು ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ ಆದ್ಯವೀರ್ ನರಸಿಂಹ ರಾಜ ಒಡೆಯರ್ ಎಂದು ಹೆಸರಿಟ್ಟಿದ್ದಾರೆ.

ಮೈಸೂರು ಅರಮನೆ ಬಿಟ್ಟು ಬೆಂಗಳೂರಿನ ಪ್ಯಾಲೇಸ್ ನಲ್ಲಿ ನಾಮಕರಣ ಸಮಾರಂಭ ಸರಳವಾಗಿ ನೆರವೇರಿತು. ಮೈಸೂರು ರಾಜಮನೆತನಕ್ಕೆ ರಾಜಕುಮಾರನ ಆಗಮನವಾದಾಗ ಇಡೀ ರಾಜ್ಯವೇ ಸಂಭ್ರಮ ಪಟ್ಟಿತ್ತು. ಇಂದು ಯದುವೀರ್ ತ್ರಿಷಿಕಾ ದಂಪತಿಯ ಮುದ್ದು ಕಂದನ ನಾಮಕರಣ ಸಮಾರಂಭದಲ್ಲಿ ರಾಜ ಕುಟುಂಬಸ್ಥರು ಭಾಗಿಯಾಗಿ ಯುವರಾಜನಿಗೆ ಶುಭ ಹಾರೈಸಿದರು.ಸಮಾರಂಭಕ್ಕೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹತ್ತಿರದ ಸಂಬಂಧಿಗಳಷ್ಟೇ ಭಾಗಿಯಾಗಿದ್ದು ಆದ್ಯವೀರ್ ಯುವರಾಜ ಮೈಸೂರು ಸಂಸ್ಥಾನದ ಹೆಸರು ಉಳಿಸಿ ಬೆಳಸಲಿ ಎಂದು ಹಾರೈಸಿದರು.

 

 

Edited By

Shruthi G

Reported By

Shruthi G

Comments