ನಿಮ್ಮ ಮನ ಮೆಚ್ಚಿದ ಹುಡುಗಿಯ ಹೃದಯ ಗೆಲ್ಲೋದು ಹೇಗೆ ? ಇಲ್ಲಿದೆ ನೋಡಿ ಟಾಪ್ ಸೀಕ್ರೆಟ್ ..!
ಈಗಿನ ಕಾಲದ ಕೆಲ ಹುಡುಗರು ಹುಡುಗಿಯರ ಪ್ರೀತಿ ಗೆಲ್ಲುವುದರಲ್ಲಿ ನಿಸ್ಸಿಮರಾಗಿರುತ್ತಾರೆ. ಮತ್ತೆ ಕೆಲವರಿಗೆ ಹುಡುಗಿಯರ ಮನಸ್ಸನ್ನು ಗೆಲ್ಲುವುದರ ಬಗ್ಗೆ ಗಂಧ ಗಾಳಿಯು ಸಹ ತಿಳಿದಿರುವುದಿಲ್ಲ. ಇನ್ನು ಕೆಲವರಂತೂ ಪ್ರೀತಿಸಿದ ಹುಡುಗಿಗೆ ತಮ್ಮ ಭಾವನೆಗಳನ್ನು ಹೇಳಿಕೊಳೋಕೆ ಚಡಪಡಿಸುತ್ತಿರುತ್ತಾರೆ. ಹುಡುಗಿಯರಿಗೆ ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೇಳುವುದರಿಂದ ಹುಡುಗಿ ಮನಸ್ಸಿಗೆ ಖುಷಿ ಸಿಗುತ್ತದೆ. ಆದ್ರೆ ಕೆಲ ಹುಡುಗರು ಅದ್ರಲ್ಲೇನಿದೆ ಹೇಳೋ ಅಂತದ್ದು ಅಂತ ಹೇಳ್ತಾರೆ. ಇಂತಹ ಗುಣಗಳನ್ನು ಹೇಳೋದ್ರಿಂದಲೇ ಹುಡುಗಿಗೆ ನಿಮ್ಮ ಮೇಲಿನ ಪ್ರೀತಿ ದುಪಟ್ಟಾಗುತ್ತದೆ. ಇವು ಇಷ್ಟೇ ಅಲ್ಲ ಇನ್ನು ಕೆಲವು ಸೀಕ್ರೆಟ್ ಗಳನ್ನು ಹೇಳ್ತಿವಿ ನೋಡಿ.
* ಹುಡುಗಿಯರಿಗೆ ಹೊಗಳಿಕೆ ಹಾಗು ಅಭಿನಂದನೆಗಳು ಅವರಿಗೆ ಮತ್ತಷ್ಟು ಸಂತೋಷವನ್ನು ಉಂಟು ಮಾಡುತ್ತವೆ. ಹಾಗಂತ ಇರದೇ ಇದದ್ದನ್ನು ಹೇಳಬಾರದು. ಪ್ರತಿಯೊಬ್ಬ ಹುಡುಗಿಯಲ್ಲ್ಲೂ ಒಂದೊಂದು ಒಳ್ಳೆಯ ಗುಣಗಳಿರುತ್ತವೆ ಅವುಗಳನ್ನು ಗುರುತಿಸಿ ಹೇಳಿದ್ರೆ ಸಾಕು. ಅಂದ್ರೆ, ನನ್ನ ಜೀವನದಲ್ಲಿ ವಿಶಿಷ್ಟವಾದ ಹುಡುಗಿ ನೀನೆ ಎಂದರೆ ಸಾಕು ಆ ತಕ್ಷಣ ಅವಳ ಮನಸ್ಸಿನಲ್ಲಿ ಸ್ಥಾನ ಕೊಟ್ಟು ಬಿಡುತ್ತಾಳೆ.
* ಏನಾದರೂ ಗಿಫ್ಟ್ ತೆಗೆದು ಕೊಳ್ಳುವಾಗ ಆಕೆಯ ಅಭಿಪ್ರಾಯ ಪಡೆದುಕೊಳ್ಳುವುದು ಒಳಿತು. ಯಾಕಂದ್ರೆ ತನ್ನ ಅಭಿಪ್ರಾಯವನ್ನು ತೆಗೆದು ಕೊಳ್ಳುತ್ತಿದ್ದಾರೆಂದು ತುಂಬಾ ಸಂತೋಷಪಡುತ್ತಾಳೆ.
* ನನ್ನ ಜೀವನದಲ್ಲಿನ ಎಲ್ಲಾ ಕಷ್ಟ - ಸುಖಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನೀನೆ ನನಗೆ ಎಲ್ಲಾ ಎಂದು ಹೇಳುವುದರಿಂದ, ನಿಮ್ಮ ಈ ಮಾತುಗಳು ಆಕೆಗೆ ನಿಮ್ಮ ಮೇಲಿದ್ದ ಪ್ರೀತಿಯನ್ನು ದುಪ್ಪಟು ಮಾಡುತ್ತವೆ.
* ಆಕೆ ನಿಮ್ಮ ಜೀವನದಲ್ಲಿ ಕಾಲಿಟ್ಟಿದ್ದು ಅದೃಷ್ಟ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿದ್ದರೆ ಸಾಲದು, ಅದನ್ನು ಆಕೆಯೊಂದಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮಿಬ್ಬರ ಅನುಬಂಧ ಮತ್ತಷ್ಟು ಸದೃಢಗೊಳ್ಳುವುದು.
* ನಿಮ್ಮ ಇಷ್ಟ, ಬೇಕು ಬೇಡಗಳ ಬಗ್ಗೆ ಹಾಗು ನಿಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ನೀವು ಹೇಳುವ ಮುನ್ನವೇ ತಿಳಿದು ಕೊಳ್ಳುತ್ತಾರೆ. ಇಂತಹ ಗುಣಗಳನ್ನು ನೀವು ಅಭಿನಂದಿಸಬೇಕು.
* ನೀವೇನಾದ್ರು ಪ್ರಾಮಿಸ್ ಮಾಡಿ ನೆರವೇರಿಸಿಕೊಡದಿದ್ದರೆ ಹುಡುಗಿಯರಿಗೆ ಬಹಳ ಕೋಪ ಬರುತ್ತದೆ. ಅಲ್ಲದೆ ನಿಮ್ಮ ಸಂಬಂಧ ಮುರಿದು ಬೀಳಬಹುದು ಆ ಕಾರಣಕ್ಕೆ ನೀವು ಈ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಬೇಕು.
* ನೀವು ನಿಮ್ಮ ಹುಡುಗಿಗೆ ಪ್ರೊಪೋಸ್ ಮಾಡುವಾಗ ಯಾವುದೇ ಫಿಲ್ಮಿ ಸ್ಟೈಲ್ ನಲ್ಲಿ ಪ್ರೊಪೋಸ್ ಮಾಡಬೇಡಿ ಅದರ ಬದಲು ನಿಮ್ಮ ಸ್ವಂತ ಬುದ್ದಿಯಿಂದ ಆಕೆಯನ್ನು ಇಂಪ್ರೆಸ್ ಮಾಡಿ ಆಗ ಯಾವ ಹುಡುಗೀತಾನೆ ಒಪ್ಪಿಕೊಳ್ಳುವುದಿಲ್ಲ.
ಈ ಟಾಪ್ ಸೀಕ್ರೆಟ್ ನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ಮನಮೆಚ್ಚಿರುವ ಹುಡುಗಿಯ ಮನಸ್ಸು ಗೆಲ್ಲುವುದು ಸುಲಭ.
Comments