ಎಲಿಫೆಂಟಾ ಗುಹೆಗಳಿಗೆ ಬಂತು ಬಂತು ಕರೆಂಟು ಬಂತು..!
ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದಿದ್ದರೂ ಯುನೆಸ್ಕೋ ಪಾರಂಪರಿಕ ತಾಣವಾದ ಎಲಿಫೆಂಟಾಕ್ಕೆ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ. ಈ ಗುಹೆಗಳು ಹೆಚೆಚ್ಚುಪ್ರವಾಸಿಗರು ಭೇಟಿ ನೀಡುತ್ತಾರೆ.ಆದ್ದರಿಂದ ಇದೀಗ ಎಲಿಫೆಂಟಾ ಗುಹೆಗಳಿಗೆ ಕೊನೆಗು ಸರ್ಕಾರ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟಿದೆ.
ಮಹಾರಾಷ್ಟ್ರದ ಮುಂಬೈ ಬಳಿಯಿರುವ ಎಲಿಫೆಂಟಾ ಗುಹೆಯಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ಗುಹೆ ಪುಟ್ಟ ದ್ವೀಪದಲ್ಲಿದ್ದು, ಇದನ್ನು ಕ್ರಿ.ಶ.5 ರಿಂದ 8 ನೇ ಶತಮಾನದದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಕೆಲವು ಇತಿಹಾಸ ದಾಖಲೆಗಳು ಗುಹೆ ನಿರ್ಮಾಣದ ಕೀರ್ತಿಯನ್ನು ರಾಷ್ಟ್ರಕೂಟ ವಂಶಕ್ಕೆ ನೀಡಿವೆ. ಶತ ಶತಮಾನಗಳ ಇತಿಹಾಸವಿರುವ ಈ ಗುಹೆಗೆ ಆಧುನಿಕ ಸಮಾಜ ಇಷ್ಟೆಲ್ಲ ಬೆಳೆದ ಮೇಲೂ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಎಲಿಫೆಂಟಾ ಗುಹೆಗಳು ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದು, ಈಗ ವಿದ್ಯುತ್ ಸಂಪರ್ಕ ದೊರಕಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ.
Comments