ಬಿಗ್ ಬಾಸ್ ಮನೆಗೆ ಹೊತ್ತಿಕೊಂಡ ಕಿಚ್ಚಿನ ಬಗ್ಗೆ ಕಿಚ್ಚ ಏನಂದ್ರು?

ರಾಮನಗರ ಜಿಲ್ಲೆಯ ಬಿಡದಿ ಬಳಿಯಲ್ಲಿರುವ ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ,ಬಿಗ್ ಬಾಸ್ ಮನೆ ಬೆಂಕಿಗಾಹುತಿಯಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ವರ್ಷದ 135 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇಡೀ ತಂಡ ಕೆಲಸ ಮಾಡುತ್ತಿತ್ತು.
ಬೆಂಕಿ ಅವಘಡದಿಂದಾದ ಆಗಿರುವ ಕೋಟ್ಯಂತರ ರೂಪಾಯಿ ನಷ್ಟಕ್ಕಿಂತ ಬಿಗ್ ಬಾಸ್ ಮನೆ ನಮಗೆ ಭಾವನಾತ್ಮಕವಾಗಿ ಬೆರೆತಿದ್ದು ಈ ಘಟನೆಯಿಂದ ಮನಸ್ಸಿಗೆ ಆಗಿರುವ ನೋವು ದೊಡ್ಡದಾಗಿದೆ ಎಂದರು. ಇನ್ನು ಈ ಬಗ್ಗೆ ವಿಚಾರದ ಬಗ್ಗೆ ಬಿಗ್ ಬಾಸ್ ನಿರೂಪಕ ಸುದೀಪ್, ತಾವು ಸದ್ಯ ಥೈಲ್ಯಾಂಡ್ ನಲ್ಲಿದ್ದು, ಹೆಚ್ಚಿನ ವಿವರ ಸಿಕ್ಕಿಲ್ಲ. ಆದ್ರೆ ಬಿಗ್ ಬಾಸ್ ಮನೆ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು, ಬೆಂಕಿ ಅನಾಹುತ ದುರದೃಷ್ಟಕರ ಎಂದಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಗ್ ಬಾಸ್ ಸೀಸನ್ 5 ನಲ್ಲಿ ಸ್ಪರ್ಧಿಗಳಾಗಿದ್ದ ಶ್ರುತಿ ಪ್ರಕಾಶ್, ನಿವೇದಿತಾ ಗೌಡ ಹಾಗೂ ದಿವಾಕರ್ ಸಹ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆ ಮಾತ್ರವಲ್ಲ ಅಲ್ಲಿನ ನಮ್ಮ ನೆನಪುಗಳೂ ಸುಟ್ಟು ಹೋಗಿವೆ ಅಂತಾ ಹೇಳಿದ್ದಾರೆ.
Comments