ಸೈಕೋ ಕಾಟಕ್ಕೆ ನಲುಗಿ ಹೋದ ಬೆಂಗಳೂರಿನ ನಾಗರಿಕರು

ಬೆಂಗಳೂರು ಯಲಹಂಕ ಉಪನಗರದಲ್ಲಿ ಸೈಕೋ ಕಾಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಯುವಕನೊಬ್ಬ ಒಂಟಿಯಾಗಿರುವ ಮಹಿಳೆಯರು, ಯುವತಿಯರ ಮನೆ ಬಾಗಿಲು ಬಡಿದು ಕಾಟ ಕೊಡುತ್ತಿದ್ದು, ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಆದಿ ಎಂಬಾತನೇ ಇಂತಹ ಕೆಲಸ ಮಾಡುತ್ತಿದ್ದ ಯುವಕ. ಫೆಬ್ರವರಿ 19 ರಂದು ಯುವತಿಯೊಬ್ಬರ ಮನೆ ಬಾಗಿಲು ಬಡಿದು ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಯುವತಿಯ ಸಹೋದರ ಹೊರಗೆ ಬಂದು ಗದರಿದಾಗ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಯುವತಿಯ ಸಹೋದರ ಅಕ್ಕಪಕ್ಕದ ನಿವಾಸಿಗಳಿಗೆ ಈ ವಿಷಯ ತಿಳಿಸಿದಾಗ, ಅವರ ಮನೆಗಳಲ್ಲೂ ಇದೇ ರೀತಿ ಮಾಡಿರುವ ವಿಷಯ ಗೊತ್ತಾಗಿದೆ. ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರದಲ್ಲಿ ಸೈಕೋ ಆದಿ ಕಾಟದಿಂದ ನೊಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
Comments