ಚಿನ್ನ ಖರೀದಿಸಬೇಕಂತಿದೀರಾ..ನಿಮಗೆ ಇಲ್ಲಿದೆ ಸಿಹಿ ಸುದ್ದಿ..!!
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಅದು ಅಲ್ಲದೆ ಮಧುವೆಯ ಸಮಾರಂಭಗಳಲ್ಲಿ ಚಿನ್ನದ ಅವಶ್ಯಕತೆ ಹೆಚ್ಚಿರುತ್ತದೆ. ಅದರಲ್ಲೂ ಕೆಲ ಚಿನ್ನ ಪ್ರಿಯರಿಗೆ ಇದು ಖುಷಿ ಕೂಡುವ ಸುದ್ದಿ .ಸದ್ಯ 10 ಗ್ರಾಂ ಚಿನ್ನದ ಬೆಲೆ 31,350 ರೂಪಾಯಿ ಇದೆ.
ಆದ್ರೆ ಬೆಳ್ಳಿ ಬೆಲೆಯಲ್ಲಿ 85 ರೂಪಾಯಿ ಏರಿಕೆಯೊಂದಿಗೆ, ಕೆಜಿ ಬೆಳ್ಳಿ ದರ 39,385 ರೂಪಾಯಿಗೆ ಬಂದು ತಲುಪಿದೆ. ಇನ್ನೇನು ಮದುವೆ ಸೀಸನ್ ಮುಗಿಯುತ್ತ ಬಂದಿರೋದ್ರಿಂದ ಚಿನ್ನಕ್ಕೆ ಅಷ್ಟೊಂದು ಬೇಡಿಕೆ ಇಲ್ಲ. ಚಿನ್ನ ಪ್ರಿಯರಿಗೆ ಸಮಾಧಾನಕರ ಸುದ್ದಿಯಿದೆ. ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಸ್ಥಳೀಯ ಆಭರಣಕಾರರು ಮತ್ತು ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾಗಿರೋದ್ರಿಂದ ಬಂಗಾರದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ಜ್ಯುವೆಲರ್ ಗಳು ಹಾಗೂ ಆಭರಣ ವ್ಯಾಪಾರಿಗಳು ಬಂಗಾರ ಖರೀದಿಗೆ ಮುಗಿಬೀಳುತ್ತಿಲ್ಲ. ಹಾಗಾಗಿ ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆ 350 ರೂಪಾಯಿ ಇಳಿಕೆ ಕಂಡಿದೆ. ಆದ್ರೆ ಸವರನ್ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 8 ಗ್ರಾಂಗೆ 24,800 ರೂಪಾಯಿ ಇದೆ.
Comments