ಹ್ಯಾಟ್ರಿಕ್ ಹೀರೋ ಕಾಲಿಗೆ ಬೀಳಲು ಮುಂದಾದ ರೆಡ್ಡಿ

ಇಂದು ನಟ ಶಿವರಾಜ್ಕುಮಾರ್ ವಿದ್ವತ್ ಆರೋಗ್ಯ ವಿಚಾರಿಸಲು ಮಲ್ಯ ಆಸ್ಪತ್ರೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಂಸದ ಶ್ರೀರಾಮುಲು ನಟನ ಕಾಲಿಗೆ ಬೀಳಲು ಮುಂದಾಗಿದ್ದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಶಿವರಾಜ್ ಆಗಮಿಸುವುದಕ್ಕೂ ಮೊದಲು ವಿದ್ವತ್ನನ್ನು ನೋಡಲು ಬಂದಿದ್ದ ರೆಡ್ಡಿ ಬ್ರದರ್ಸ್, ನಲಪಾಡ್ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಅಂತ ಮಾಧ್ಯಮದವರಿಗೆ ತಮ್ಮ ಅನಿಸಿಕೆ ಹೇಳುತ್ತಿದ್ದರು. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದು, ಇದನ್ನು ಕಂಡ ಜನಾರ್ದನ ರೆಡ್ಡಿ ತಮ್ಮ ಮಾತನ್ನು ಮೊಟಕುಗೊಳಿಸಿ ಶಿವಣ್ಣನನ್ನು ಮಾತನಾಡಿಸಲು ತೆರಳಿದ್ದಾರೆ. ಈ ಮಧ್ಯೆ ಶಿವಣ್ಣ ತನ್ನ ಕಾಲಿಗೆ ಬೀಳಲು ಮುಂದಾದ ರೆಡ್ಡಿ ಬ್ರದರ್ಸ್ನ್ನು ಕಾಲಿಗೆ ಬೀಳದಂತೆ ನಟ ತಡೆದಿದ್ದಾರೆ.
Comments