ತಾನು ಸಾಯುವ ಮುನ್ನ ಕುಮಾರಣ್ಣನನ್ನು ನೋಡಬೆಂಬ ಮಹದಾಸೆ ಹೊಂದಿರುವ ಅಭಿಮಾನಿ

ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ 24 ವರ್ಷದ ಪದವೀಧರ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್ ನಿಂದ ಬಳಲುತ್ತಿದ್ದಾರೆ. ತಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.
ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.
Comments