ಮೊದಲ ಬಾರಿ ಯುದ್ಧ ವಿಮಾನ ಚಲಿಸಿ ಹೆಗ್ಗಳಿಕೆ ಪಾತ್ರರಾದ ಮಹಿಳಾ ಅಧಿಕಾರಿ

ಇತ್ತೀಚಿಗೆ ಮಹಿಳೆಯರು ಸಹ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಇದಕ್ಕೆ ಸಾಕ್ಷಿ ಎಂಬಂತೆ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಈವರೆಗೆ ಭಾರತದಲ್ಲಿ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಎಂಬ ಓರ್ವ ಮಹಿಳೆ ಕಾಲಿಟ್ಟಿದ್ದಾರೆ.
ಅವನಿ ಚತುರ್ವೇದಿ ಗುಜರಾತ್ ನ ಜಮ್ ನಗರ್ನಿಂದ ಎಮ್ಐಜಿ-21 ಬೈಸನ್ ವಿಮಾನವೇರಿ ಹಾರಾಟ ಶುರು ಮಾಡಿದ್ರು. ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶ್ವಿಯಾಗಿ ಹಾರಾಟ ನಡೆಸಿದ್ರು. ಈ ಮೂಲಕ ಅವನಿ, ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ಎನಿಸಿಕೊಂಡ್ರು. ಅಲ್ಲದೆ ಯುದ್ಧ ವಿಮಾನ ಚನೆ ಮಾಡಿ ಇತಿಹಾಸ ಸೃಷ್ಟಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.
Comments