ಸರ್ಕಾರದ ಈ ಸೌಲಭ್ಯ ಪಡಿಬೇಕಾದ್ರೆ ಆಧಾರ್ ಕಡ್ಡಾಯ

22 Feb 2018 12:28 PM | General
334 Report

ಸರ್ಕಾರದ ಸವಲತ್ತು ಸೇವೆ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಉದ್ದೇಶದ ಕರ್ನಾಟಕ ಆಧಾರ್ ವಿಧೇಯಕ 2018 ಅನ್ನು ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅನುಮೋದಿಸಿತು.

ರಾಜ್ಯ ಸರ್ಕಾರದ ನರೇಗಾ ಕೂಲಿ, ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನ ಹಾಗೂ ಸೇವೆ ಪಡೆದುಕೊಳ್ಳಲು ಇನ್ಮುಂದೆ ಆಧಾರ್ ಕಡ್ಡಾಯವಾಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಮಂಡಿಸಿದ ನೂತನ ವಿಧೇಯಕ ಸದನಕ್ಕೆ ಒಪ್ಪಿಗೆ ನೀಡಿತು. ಸರ್ಕಾರದ ಯೋಜನೆಗಫಲಾನುಭವಿಗಳಾಗಲು ಆಧಾರ್ ಕಡ್ಡಾಯ ಮಾಡಲು ಈ ಶಾಸನ ರೂಪಿಸಲಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.

 

Edited By

Shruthi G

Reported By

Madhu shree

Comments