ಹುಡುಗರನ್ನು ನೋಡಿದ ಕ್ಷಣ ಹುಡುಗಿಯರು ಗಮನಿಸುವ ವಿಷಯಗಳೇನು ಗೊತ್ತಾ..!!

ಹುಡುಗರನ್ನು ಮೊದಲ ಬಾರಿ ನೋಡಿದಾಕ್ಷಣ ಹುಡುಗಿಯರು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಲು ಮುಂದಾಗುತ್ತಾರೆ. ಹಾಗಾದ್ರೆ ಹುಡುಗರೇ, ಹುಡುಗಿಯರು ನಿಮ್ಮನ್ನ ನೋಡಿದಾಗ ಯಾವ ವಿಷಯಗಳನ್ನೆಲ್ಲ ಗಮನಿಸುತ್ತಾರೆ ಎಂಬುದನ್ನ ತಿಳ್ಕೊಬೇಕಾ..? ಹಾಗಿದ್ರೆ ಈ ಸುದ್ದಿ ಓದಿ. ಹುಡುಗಿಯರು ನಿಮ್ಮನ್ನ ಮೊದಲ ಬಾರಿ ಭೇಟಿಯಾದಾಗ ನಿಮ್ಮ ಬಗ್ಗೆ, ನೀವು ಎಂತವರು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.
*ಹುಡುಗಿಯರು ಹುಡುಗರನ್ನು ನೋಡಿದಾಕ್ಷಣ ಮೊದಲು ಗಮನಿಸುವುದು ಬಾಡಿ ಲ್ಯಾಂಗ್ವೇಜ್ ಅವರು ಯಾವ ರೀತಿ ನಿಂತಿದ್ದಾರೆ, ಯಾವ ರೀತಿಯಾಗಿ ನಡೀತಾ ಇದ್ದಾರೆ, ಕಾಂಫಿಡೆಂಟ್ ಹಾಗೆ ಇದ್ದರೋ ಇಲ್ವೋ ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸುತ್ತಾರೆ. ಆದರಿಂದ ನೀವು ನಿಮ್ಮ ಬಾಡಿ ಲ್ಯಾಂಗ್ವೇಜ್ ಬಗ್ಗೆ ಸ್ವಲ್ಪ ಗಮನ ಹರಿಸಬೇಕು.
* ಎರಡನೇಯದಾಗಿ ನೀವು ಆಕ್ಟಿವ್ ಆಗಿ ಇದ್ದಿರೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ. ಅಂದ್ರೆ ನೀವು ನಗ್ತಾ ನಗಿಸ್ತಾ ಎಲ್ಲರೊಂದಿಗೆ ಬೆರತು ಇದ್ದಿರೋ ಇಲ್ಲವೋ ಎಂಬುದನ್ನು ನೋಡ್ತಾರೆ. ಅದಕ್ಕೆ ನಿಮ್ಮ ಮುಖದಲ್ಲಿ ನಗು ಇದ್ರೆ ಸಾಕು, ತನ್ನ ತಾನಾಗಿ ಆಕರ್ಷಣೆ ಬರುತ್ತೆ.
* ಇನ್ನು ಮೂರನೆಯದಾಗಿ ನಿಮ್ಮಮ್ಯಾನ್ ನರ್ಸ್ ಹೇಗಿದೆ ಅಂತ ನೋಡ್ತಾರೆ. ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಾ ಅನ್ನೋದನ್ನು ಗಮನಿಸುತ್ತಿರುತ್ತಾರೆ. ಅಲ್ಲದೆ ನಿಮ್ಮನ್ನ ಅರ್ಥ ಮಾಡ್ಕೊಳೊಕೆ ಪ್ರಯತ್ನಿಸುತ್ತಾರೆ.
* ನೀವು ಸ್ಟೈಲಿಶ್ ಆಗಿದ್ದಿರೋ ಇಲ್ವೋ ಎಂದು ಗಮನಿಸುತ್ತಾರೆ. ನೀವು ಯಾವ ರೀತಿ ಬಟ್ಟೆ ಧರಿಸ್ತಿರಾ ಅವು ನಿಮಗೆ ಹೊಂದಿಕೊಂಡಿವೆಯೇ ಎಂದು ನೋಡ್ತಾರೆ.
* ಕೊನೆಯದಾಗಿ ನಿಮ್ಮ ಶರೀರದಿಂದ ಯಾವ ರೀತಿಯ ವಾಸನೆ ಬರುತ್ತಿದೆ ಎಂಬುದನ್ನು ಸಹ ಗಮನಿಸುತ್ತಾರೆ. ಅಷ್ಟೇ ಅಲ್ಲದೆ ಹುಡುಗಿಯರು ಮೊದಲನೆಯದಾಗಿ ನೀವೇ ಮಾತನಾಡಿಸಬೇಕು ಎಂದು ಬಯಸುತ್ತಾರೆ.
ಈ ಐದು ಲಕ್ಷಣಗಳನ್ನು ತಿಳಿದು ಕೊಂಡ್ರೆ ಸಾಕು ಹುಡುಗಿಯನ್ನು ಇಂಪ್ರೆಸ್ ಮಾಡುವುದು ನಿಮಗೆ ಸುಲಭವಾಗುತ್ತದೆ.
Comments