ಕನ್ನಡದ ಹಾಸ್ಯನಟನಿಗೆ ವರದರಾಜ ಪ್ರಶಸ್ತಿ

ಅಣ್ಣಾವ್ರ ಜೊತೆಗೂಡಿ ಹಾಸ್ಯ ನಟನೆಯ ಮೂಲಕ ನಮ್ಮೆಲ್ಲರನ್ನೂ ರಂಜಿಸುತ್ತಿರುವ ಸೀತಾಪತಿ ಎಂದೇ ಪ್ರಖ್ಯಾತಿ ಹೊಂದಿದ ಹಾಸ್ಯನಟ ಉಮೇಶ್ ರವರಿಗೆ ಎಸ್ .ಪಿ ವರದಾರಾಜು ಆತ್ಮೀಯ ಬಳಗದಿಂದ ಸೋಮವಾರ ನಡೆದ ಸಮಾರಂಭದಲ್ಲಿ ಎಸ್. ಪಿ. ವರದಾರಾಜು ಪ್ರಶಸ್ತಿಯನ್ನು ಹಾಸ್ಯ ನಟ ಎಂ.ಎಸ್. ಉಮೇಶ್ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾವಿರಾರು ಮಂದಿ ಕಲಾವಿದರನ್ನು ಪೋಷಿಸುವಲ್ಲಿ ಡಾ. ರಾಜ್ ಕುಮಾರ್ ಅವರ ಪಾತ್ರ ದೊಡ್ಡದು, ತಮ್ಮೊಡನೆ ಸಾವಿರಾರು ಕಲಾವಿದರು ಸಹ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಇದರಿಂದ ಅವರೆಲ್ಲರೂ ಇಂದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅಣ್ಣಾವ್ರ ಸಹೋದರನಾಗಿ ಜನಿಸಲಿಲ್ಲ. ಆದರೆ, ಅವರ ಒಡನಾಟ ದೊರೆತದ್ದು ನಿಜಕ್ಕೂ ಪುಣ್ಯವೇ ಸರಿ, ಅವರ ಸಹಕಾರದಿಂದಲೇ ನಾನು ಬಣ್ಣಹಚ್ಚಿಕೊಂಡು ರಂಗಭೂಮಿಗೆ ಬಂದೆ ಎಂದು ಉಮೇಶ್ ಹೇಳಿದರು.
Comments