ಇಂದಿರಾ ಕ್ಯಾಂಟೀನ್ ಮೆನುವಿಗೆ ಮತ್ತೊಂದು ಡಿಶ್ ಸೇರ್ಪಡೆ
ಇಂದಿರಾ ಕ್ಯಾಂಟೀನ್ ಸ್ಥಾಪನೆಯದಾಗಿನಿಂದ ಮೆನುವಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಇದೀಗ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ ಸೊಪ್ಪಿನ ಸಾರು ಸೇರ್ಪಡೆ ಗೊಂಡಿದೆ. ಈಗಾಗಲೇ ಕೆಲ ಕ್ಯಾಂಟೀನ್ ಗಳಲ್ಲಿ ಪ್ರಾಯೋಗಿಕವಾಗಿ ಮುದ್ದೆ ಊಟ ವಿತರಿಸುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಇದುವರೆಗೆ ಹನುಮಂತನಗರದಲ್ಲಿ ನಡೆಯುತ್ತಿರುವ ಅಪ್ಪಾಜಿ ಕ್ಯಾಂಟೀನ್ ಲ್ಲಿ ಮಾತ್ರ ಹಾಗೂ ಸೊಪ್ಪಿನ ಸಾರು ನೀಡಲಾಗುತ್ತಿತ್ತು. ಈಗ ಇಂದಿರಾ ಕ್ಯಾಂಟೀನ್ ನಲ್ಲಿಯೂ ಮುದ್ದೆ ಊಟ ಸಿಗಲಿದೆ.ಇಂದಿರಾ ಕ್ಯಾಂಟೀನ್ ಗಳಿಗೆ ಮೊದಲಿನಷ್ಟು ಜನ ಬರುತ್ತಿಲ್ಲ. ಹಾಗಾಗಿ ಹೆಚ್ಚು ಜನರು ಬರುವಂತೆ ಮಾಡಲು ಇದೊಂದು ಪ್ರಯತ್ನ ಎಂದರು. ಅಲ್ಲದೇ ಮುದ್ದೆ ಊಟ ನೀಡುವಂತೆ ಬೇಡಿಕೆ ಬಂದಿದೆ. ಹಾಗಾಗಿ ಬ್ಯಾಟರಾಯನಪುರ ಕ್ಷೇತ್ರದ ಐದಾರು ವಾರ್ಡ್ ಗಳಲ್ಲಿ ಮುದ್ದೆ, ಸೊಪ್ಪಿನ ಸಾಂಬಾರ್ ನೀಡಲಾಗುತ್ತಿದೆ. ಮುದ್ದೆ ತಯಾರಿಕೆಗಾಗಿಯೇ ಮೈಸೂರಿನಿಂದ ಯಂತ್ರ ಖರೀದಿಸಿ ತರಲಾಗಿದೆ. ಇದರಲ್ಲಿ ಒಂದು ತಾಸಿಗೆ 250 ಮುದ್ದೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
Comments